ಉಡುಪಿ:(ಡಿ.22) ತ್ರಾಸಿ ಬೀಚ್ ನಲ್ಲಿ ಟೂರಿಸ್ಟ್ ಬೋಟ್ ಪಲ್ಟಿಯಾದ ಘಟನೆ ನಡೆದಿದೆ. ಟೂರಿಸ್ಟ್ ಬೋಟ್ ಪಲ್ಟಿಯಾಗಿ ಜಟ್ಸ್ಕೀ ಬೋಟ್ ರೈಡರ್ ರವಿದಾಸ್ ಕಣ್ಮರೆಯಾಗಿದ್ದಾರೆ.
ಇದನ್ನೂ ಓದಿ: ಉಜಿರೆ: ಉಜಿರೆಯ ಬೆನಕ ಹೆಲ್ತ್ ಸೆಂಟರ್ ನಲ್ಲಿ ಉಜಿರೆ ಪರಿಸರದ ರಿಕ್ಷಾ ಚಾಲಕರು, ಮಾಲಕರು ಮತ್ತು
ಉತ್ತರ ಕನ್ನಡ ಮೂಲದ ರವಿದಾಸ್ ಗೆ ಶೊಧಕಾರ್ಯ ಮುಂದುವರೆದಿದೆ. ಬೋಟ್ ನಲ್ಲಿದ್ದ ಬೆಂಗಳೂರಿನ ಪ್ರವಾಸಿಗ ಪ್ರಶಾಂತ್ ಬಚಾವ್ ಆಗಿದ್ದಾರೆ.
ಗಂಗೊಳ್ಳಿ ಪೊಲೀಸ್, ಕರಾವಳಿ ಪೊಲೀಸ್ ಪಡೆ, ಸ್ಥಳೀಯರಿಂದ ಶೋಧ ಕಾರ್ಯ ಮುಂದುವರೆದಿದೆ. ಉಡುಪಿಯ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.