Mon. Jan 13th, 2025

Bengaluru: 2 ಮಕ್ಕಳ ತಂದೆಯನ್ನು ಮದ್ವೆಯಾಗಲು ಇಬ್ಬರು ಮಹಿಳೆಯರ ನಡುವೆ ಕಿತ್ತಾಟ – ಕೊನೆಗೆ ಆತ ಸಿಕ್ಕಿದ್ದು ಯಾರಿಗೆ?!

ಬೆಂಗಳೂರು, (ಜನವರಿ 13): ಒಬ್ಬ ವ್ಯಕ್ತಿಯನ್ನು ಮದುವೆಯಾಗಲು ಇಬ್ಬರು ಮಹಿಳೆಯರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅಂಜನಾನಗರದಲ್ಲಿ ನಡೆದಿದೆ. ಈಗಾಗಲೇ ಪತ್ನಿಯನ್ನು ಕಳೆದುಕೊಂಡಿರುವ ರವಿಗೆ ಎರಡು ಮಕ್ಕಳು ಸಹ ಇವೆ. ಆದರೂ ಸಹ ರವಿಯನ್ನು ಮದುವೆಯಾಗಲು ಇಬ್ಬರು ಮಹಿಳೆಯರು ಕಿತ್ತಾಡಿಕೊಂಡಿದ್ದು, ಈ ಜಗಳ ತಾರಕಕಕ್ಕೇರಿ ಕೊನೆಗೆ ಓರ್ವ ಮಹಿಳೆ ಚಾಕುವಿನಿಂದ ಇರಿದಿದ್ದಾಳೆ. ರವಿಯನ್ನು ವಿವಾಹವಾಗಲು ರುಕ್ಮಿಣಿ(38) ಹಾಗೂ ಭಾಗ್ಯ(40) ರಂಪಾಟ ಮಾಡಿಕೊಂಡಿದ್ದು, ಈ ವೇಳೆ ಭಾಗ್ಯ, ರುಕ್ಮಿಣಿಗೆ ಚಾಕುವಿನಿಂದ ಇರಿದಿದ್ದಾಳೆ.

ಇದನ್ನೂ ಓದಿ: ಮಡಿಕೇರಿ: ಹಾಡುಹಗಲೇ ಕಾರು ಕಳವುಗೈದ ಖದೀಮ

ರವಿ ಕಳೆದ 11ವರ್ಷದ ಹಿಂದೆ ಲಕ್ಷ್ಮೀಯನ್ನು ಮದುವೆಯಾಗಿದ್ದು, ಇವರಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆದ್ರೆ, ಲಕ್ಷ್ಮೀ ಮೃತಪಟ್ಟಿದ್ದು, ಬಳಿಕ ರವಿ, ಮಾಜಿ ಲವರ್ ರುಕ್ಮಿಣಿಯನ್ನು ಮನೆಗೆ ಕರೆತಂದಿದ್ದ. ಈ ಹಿಂದೆ ರುಕ್ಮಿಣಿಯೂ ಸಹ ಪತಿಯನ್ನು ತೊರೆದಿದ್ದಳು. ಹೀಗಾಗಿ ರವಿ ಮತ್ತು ರುಕ್ಮುಣಿ ಮದುವೆಯಾಗಲು ತಯಾರಾಗಿದ್ದರು. ಈ ನಡುವೆ ಮೃತ ಮೊದಲ ಪತ್ನಿ ಲಕ್ಷ್ಮೀ ಅಕ್ಕ ಭಾಗ್ಯ ಕೂಡ ಪತಿಯನ್ನು ಬಿಟ್ಟು ರವಿಯನ್ನು ಮದುವೆಯಾಗಲು ಮುಂದೆ ಬಂದಿದ್ದಾಳೆ.

ಇಬ್ಬರು ಮಕ್ಕಳನ್ನು ನೋಡಿ ಕೊಳ್ಳುವೆ. ನೀನು ನನ್ನನ್ನು ಮದುವೆಯಾಗಬೇಕೆಂದು ಭಾಗ್ಯ, ರವಿಗೆ ಪಟ್ಟು ಹಿಡಿದಿದ್ದಳು. ಆದ್ರೆ, ರುಕ್ಮಿಣಿ ಮನೆಯಲ್ಲಿರುವುದು ಗೊತ್ತಾಗಿದ್ದು, ರವಿ ಕೆಲಸಕ್ಕೆ ಹೋಗಿದ್ದಾಗ ಮನೆಗೆ ಬಂದ ಭಾಗ್ಯ, ರುಕ್ಮಿಣಿ ಜೊತೆ ಜಗಳಕ್ಕೆ ಇಳಿದಿದ್ದಾಳೆ. ಅಲ್ಲದೇ ಮನೆಯಿಂದ ಹೊರಗೆ ದೂಡಲು ಯತ್ನಿಸಿದ್ದಾಳೆ. ಗಲಾಟೆ ವಿಕೋಪಕ್ಕೆ ತಿರುಗಿ ದೊಣ್ಣೆಯಿಂದ ಬಡಿದು ಬಳಿಕ ಚಾಕುವಿನಿಂದ ಇರಿದಿದ್ದಾಳೆ.

ಸದ್ಯ ಗಾಯಗೊಂಡ ರುಕ್ಮಿಣಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ. ಇನ್ನು ತಂಗಿ ಗಂಡನಿಗಾಗಿ ಚಾಕು ಹಾಕಿದ ಭಾಗ್ಯಳನ್ನು ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಒಟ್ಟಿನಲ್ಲಿ ಕಟ್ಟಿಕೊಂಡ ಗಂಡನನ್ನು ಬಿಟ್ಟು ತಂಗಿ ಗಂಡನ ಜೊತೆ ಸಂಸಾರ ಮಾಡಲು ಬಂದ್ದಿದ್ದ ಮಹಿಳೆ ಇದೀಗ ಜೈಲು ಪಾಲಾಗಿದ್ದು, ರುಕ್ಮಿಣಿ ತನ್ನ ಮಾಜಿ ಪ್ರಿಯಕರ ರವಿ ಜೊತೆ ಮತ್ತೆ ಒಂದಾಗಿದ್ದಾಳೆ.

Leave a Reply

Your email address will not be published. Required fields are marked *