Thu. Jan 30th, 2025

Belthangady: ಸೋಮಂತ್ತಡ್ಕದಲ್ಲಿ ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಅಪಘಾತ..!-ಮುಂಭಾಗದ ಗಾಜು ಪುಡಿಯಾಗಿ ಮೋರಿಗೆ ಬಿದ್ದ ವಿದ್ಯಾರ್ಥಿಗಳಿಗೆ ಗಾಯ..!

ಸೋಮಂತ್ತಡ್ಕ :ಉಜಿರೆಯಿಂದ ಸೋಮಂತ್ತಡ್ಕ ಮಾರ್ಗವಾಗಿ ಆಲಂದಡ್ಕಕ್ಕೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮೋರಿಗೆ ಡಿಕ್ಕಿ ಹೊಡೆದಿರುವ ಘಟನೆ ಸೋಮಂತ್ತಡ್ಕದ ಬಳಿ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿದ ಬಸ್ ನೇರವಾಗಿ ಹೋಗಿ ಮೋರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬಸ್ ನಲ್ಲಿದ್ದ ವಿದ್ಯಾರ್ಥಿಗಳು ಬಸ್ ನ ಮುಂಭಾಗದ ಗಾಜು ಪುಡಿಯಾಗಿ ಮೋರಿಯ ಮೇಲೆ ಬಿದ್ದಿದ್ದಾರೆ.

ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕೂಡಲೇ ಅವರನ್ನು ಉಜಿರೆಯ ಎಸ್. ಡಿ. ಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಬಸ್ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು.

ತಪ್ಪಿದ ಭಾರೀ ಅವಘಡ..!:

ಮೋರಿಯ ಬದಿಯಲ್ಲೇ ದೊಡ್ಡ ದೊಡ್ಡ ಕಬ್ಬಿಣ ಸರಳುಗಳು ಇದ್ದವು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಜೊತೆಗೆ ಮೋರಿಯ ಪಕ್ಕದಲ್ಲೆ ದೊಡ್ಡ ಹೊಂಡ ಇದ್ದು ಅದಕ್ಕೆ ಬೀಳದೆ ಮೋರಿಗೆ ಡಿಕ್ಕಿಯಾಗಿ ಬಸ್ ಅಲ್ಲೇ ನಿಂತಿತ್ತು. ಜೊತೆಗೆ ಮೋರಿಯ ಹೊಂಡದ ಪಕ್ಕದಲ್ಲಿ ಮನೆ ಕೂಡ ಇತ್ತು. ಚಾಲಕನ ಅಜಾಗರೂಕತೆ ಮತ್ತು ಕೆ.ಎಸ್. ಆರ್.ಟಿಸಿಯ ಬಸ್ ಗಳ ಅವ್ಯವಸ್ಥೆ ಬಗ್ಗೆ ಸ್ಥಳೀಯರು ಅಸಮಾದಾನ ವ್ಯಕ್ತಪಡಿಸಿರುವ ಘಟನೆ ಕೂಡ ನಡೆಯಿತು.

ಮುಗ್ರೋಡಿ ಕನ್ಸ್ಟ್ರಕ್ಷನ್ ಸಿಬ್ಬಂದಿಗಳಿಂದ ರಕ್ಷಣಾ ಕಾರ್ಯಾಚರಣೆ..!:

ಅವಘಡ ಸಂಭವಿಸಿದಾಗ ಆ ಭಾಗದಲ್ಲೇ ಮುಗ್ರೋಡಿ ಕನ್ಸ್ಟ್ರಕ್ಷನ್ ಸಿಬ್ಬಂದಿಗಳು ಇದ್ದರು,. ಕೂಡಲೇ ಸ್ಥಳಕ್ಕೆ ಧಾವಿಸಿದ ಮ್ಯಾನೇಜರ್ ಉದಯ್ ಎಂ .ಸಿ. ಕೆ . ನೇತೃತ್ವದ ತಂಡ, ಬಸ್ಸಿನಿಂದ ಪ್ರಯಾಣಿಕರನ್ನು ಹೊರತೆಗೆದರು. ಜೊತೆಗೆ ಗಾಯಗೊಂಡಿದ್ದ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ತಲುಪಿಸುವ ಕೆಲಸ ಮಾಡಿದರು. ಪ್ರತ್ಯಕ್ಷದರ್ಶಿ ನಾರಾಯಣ ಗೌಡ, ಸ್ಥಳಿಯರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಬಸ್ ಚಾಲಕ ಹೇಳಿದ್ದೇನು..?:

ಗೇರ್ ಲೀವರ್ ತುಂಡಾಗಿ ನಿಯಂತ್ರಣ ತಪ್ಪಿತು ಕೂಡಲೇ ಬಸ್ಸನ್ನು ನಿಲ್ಲಿಸಲು ಬಲ ಬದಿಗೆ ತಂದು ಮೋರಿಗೆ ಡಿಕ್ಕಿ ಹೊಡೆದೆ. ಮಕ್ಕಳಿಗೆ ಗಾಯಾಗಳಾಗಿದೆ ಎಂದು ಬಸ್ಸಿನ ಚಾಲಕ ತಿಳಿಸಿದ್ದಾರೆ.

ಕೆ.ಎಸ್.ಆರ್. ಟಿಸಿ ಬಸ್ ಅವ್ಯವಸ್ಥೆಗೆ ಹಿಡಿಶಾಪ..!:

ಕೆ.ಎಸ್.ಆರ್. ಟಿಸಿ ಬಸ್ ಅವ್ಯವಸ್ಥೆಗೆ ಸ್ಥಳೀಯರು ಹಿಡಿಶಾಪ ಹಾಕಿರುವ ಘಟನೆ ನಡೆಯಿತು. ಯು ಪ್ಲಸ್ ಟಿವಿ ಜೊತೆ ಮಾತನಾಡಿದ ಸ್ಥಳೀಯರು. ಕೆ.ಎಸ್.ಆರ್. ಟಿಸಿ ಬಸ್ ಸರಿಯಾದ ನಿರ್ವಹಣೆ ಇಲ್ಲ ಹೀಗಾಗಿ ಇಂತಹ ಅವಘಡಗಳು ನಮ್ಮ ತಾಲೂಕಿನಲ್ಲಿ ಮತ್ತೆ ಮತ್ತೆ ನಡೆಯುತ್ತಿದೆ. ಬಸ್ ಟಯರ್ ಪಂಕ್ಚರ್, ಅಲ್ಲಲ್ಲಿ ಕೆಟ್ಟು ನಿಲ್ಲುವುದು, ಹೀಗೆ ಅನೇಕ ಸಮಸ್ಯೆಗಳು ಆಗುತ್ತಿದೆ. ಈ ಅವಘಡಕ್ಕೆ ಸಾರಿಗೆ ಇಲಾಖೆ ನೇರ ಹೊಣೆ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *