Mon. Feb 3rd, 2025

Bantwal: ಮೆಲ್ಕಾರ್ ನ ತರಕಾರಿ ಅಂಗಡಿಯಲ್ಲಿ ಕಳವು – ಶಾಲೆಗಿಟ್ಟಿದ್ದ ಕಾಣಿಕೆ ಹುಂಡಿ ಕಳ್ಳರ ಪಾಲು

ಬಂಟ್ವಾಳ:(ಫೆ.1) ಮೆಲ್ಕಾರ್ ನ ತರಕಾರಿ ಅಂಗಡಿಗೆ ಕಳ್ಳರು ನುಗ್ಗಿ ನಗದು ದೋಚಿದ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಕನ್ಯಾಡಿ: ಪ್ರಯಾಗ್‌ ರಾಜ್‌ ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಮಹಾಮಂಡಲೇಶ್ವರರಾಗಿ ಪಟ್ಟಾಭಿಷಿಕ್ತರಾದ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ

ಮಹಮ್ಮದ್ ಶರೀಫ್ ಎಂಬವರ ಮಾಲಕತ್ವದ ಅಂಗಡಿಯಲ್ಲಿ ಚಂದ್ರಿಕಾ ತರಕಾರಿ ಅಂಗಡಿಯ ಬೀಗ ಮುರಿದು ಹಣಕ್ಕಾಗಿ ಜಾಲಾಡಿದ್ದಾರೆ.

ಶರೀಫ್ ಅವರು ಸಾಮಾಜಿಕ ಸೇವಾಕರ್ತರಾಗಿದ್ದು ಸರಕಾರಿ ಶಾಲೆಯ ಅಭಿವೃದ್ದಿಗಾಗಿ ತನ್ನ ಅಂಗಡಿಯಲ್ಲಿ ಇಟ್ಟಿದ್ದ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕಳ್ಳರು ದೋಚಿದ್ದಾರೆ.

ಕಾಣಿಕೆ ಡಬ್ಬಿ ತುಂಬಿದ್ದು ಅಂದಾಜು 5 ಸಾವಿರಕ್ಕಿಂತಲೂ ಅಧಿಕ ಮೊತ್ತದ ಹಣ ಅದರಲ್ಲಿತ್ತು ಎನ್ನಲಾಗಿದೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿರುವುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *