ಪುತ್ತೂರು:(ಫೆ.6) ಮುಸುಕುಧಾರಿಗಳಿಂದ ಕೆಡವಲ್ಪಟ್ಟ ಬಿಜೆಪಿ ಮುಖಂಡನ ಮನೆಯಲ್ಲಿ ಪೋಲೀಸ್ ಮಹಜರು ಸಂದರ್ಭದಲ್ಲಿ ಚಿನ್ನಾಭರಣ ಪತ್ತೆಯಾಗಿದೆ. ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಹೆಸರಿನಲ್ಲಿ ದೇವಸ್ಥಾನದ ಆವರಣದಲ್ಲಿರುವ ಮನೆಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಈ ನಡುವೆ ದೇವಸ್ಥಾನದ ಜಾಗದಲ್ಲಿ ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಎಂಬವರ ಮನೆಯಲ್ಲಿ ಮುಸುಕುಧಾರಿಗಳ ತಂಡ ನುಗ್ಗಿ ಜೆಸಿಬಿ ಮೂಲಕ ಮನೆಯನ್ನು ನೆಲಸಮ ಮಾಡಿತ್ತು.
ಈ ಸಂಬಂಧ ಮನೆ ಯಜಮಾನ ರಾಜೇಶ್ ಬನ್ನೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮತ್ತು ಇತರರ ವಿರುದ್ಧ ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ತನಿಖೆ ಆರಂಭಿಸಿದ ಪೋಲೀಸರು ಘಟನಾ ಸ್ಥಳದಲ್ಲಿ ಮಹಜರು ನಡೆಸುವ ಸಂದರ್ಭದಲ್ಲಿ ಮನೆ ಅವಶೇಷದಡಿ ಚಿನ್ನಾಭರಣ ಪತ್ತೆಯಾಗಿದೆ.
ಘಟನೆ ನಡೆಸಿದ ಸಂದರ್ಭದಲ್ಲಿ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದು ಹಣವಿದ್ದು, ಮನೆಯ ಜಗಲಿಯಲ್ಲಿದ್ದ ನಾಯಿ ಮರಿಗಳನ್ನೂ ಕೊಂದು ಹಾಕಲಾಗಿದೆ ಎಂದು ಪೋಲೀಸ್ ದೂರಿನಲ್ಲಿ ರಾಜೇಶ್ ಬನ್ನೂರು ಉಲ್ಲೇಖಿಸಿದ್ದರು.