ಬೆಳ್ತಂಗಡಿ :(ಫೆ.7) 2006 ರಲ್ಲಿ ನಡೆದ ಲಾರಿಯ ಅಜಾಗರೂಕತೆಯ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕನಿಗೆ ಬೆಳ್ತಂಗಡಿ ನ್ಯಾಯಾಲಯಲ್ಲಿ ಒಂದು ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಿತ್ತು.

ಬಳಿಕ ಈ ಪ್ರಕರಣದ ವಿರುದ್ಧ ಲಾರಿ ಚಾಲಕ ಚಾರ್ಮಾಡಿ ಸಿದ್ಧಿಕ್(40 ವ) ಹೈಕೋರ್ಟ್ ವರೆಗೆ ಅಪೀಲು ಹೋಗಿದ್ದು ,ಅಲ್ಲಿ ಕೂಡ ಬೆಳ್ತಂಗಡಿ ನ್ಯಾಯಾಲಯ ತೀರ್ಪನ್ನು ಎತ್ತಿ ಹಿಡಿದು ಶಿಕ್ಷೆ ಖಾಯಂ ಮಾಡಿತ್ತು. ಬಳಿಕ ಲಾರಿ ಚಾಲಕ ಆರೋಪಿ ತಲೆಮರೆಸಿಕೊಂಡಿದ್ದು ಇದೀಗ ಬೆಳ್ತಂಗಡಿ ಪೊಲೀಸರು ಪತ್ತೆ ಹಚ್ಚಿ ಬಂಧಿಸಿ ಜೈಲಿಗಟ್ಟಿದ್ದಾರೆ.


ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ ಪ್ರಕರಣ 117/2006 ಕಲಂ, 279, 304 (ಎ) ಸುಮಾರು 19 ವರ್ಷದ ಹಿಂದಿನ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾದ ಬಳಿಕ ತಲೆಮರೆಸಿಕೊಂಡಿದ್ದ ವಾರಂಟು ಆರೋಪಿ ಸಿದ್ಧಿಕ್(40) ಎಂಬಾತನನ್ನು ಫೆ.6 ರಂದು


ಬಂಟ್ವಾಳ ಪೊಲೀಸ್ ಉಪ ಅಧಿಕ್ಷಕರು ವಿಜಯ್ ಪ್ರಸಾದ್ ರವರ ನಿರ್ದೇಶನದಂತೆ, ಬೆಳ್ತಂಗಡಿ ಪೊಲೀಸ್ ಠಾಣಾ ನಿರೀಕ್ಷಕರು ಬಿ.ಜಿ. ಸುಬ್ಬಾಪುರ ಮಠ, ಉಪ ನಿರೀಕ್ಷಕರು ಮುರಳೀಧರ ಮತ್ತು ಯಲ್ಲಾಪ್ಪ ರವರ ಮಾರ್ಗದರ್ಶನದಲ್ಲಿ ಠಾಣಾ ಸಿಬ್ಬಂದಿ ವೃಷಭ್, ಚರಣ್, ಧರೇಶ್ ರವರು ಬಂಧಿಸಿ ಮಾನ್ಯ ಬೆಳ್ತಂಗಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು. ನ್ಯಾಯಾಲಯ ಮಂಗಳೂರು ಸಬ್ ಜೈಲಿಗೆ ಕಳುಹಿಸಿದ್ದಾರೆ.
