ಪುತ್ತೂರು :(ಫೆ.12) ನರಿಮೊಗರು ಶಾಲಾ ಬಳಿ ಆಟೋರಿಕ್ಷಾ ಮತ್ತು ದ್ವಿ ಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದ್ದು ಸವಾರರಿಗೆ ಗಾಯವಾಗಿದ್ದು ತಕ್ಷಣ ಅಲ್ಲಿಗೆ ಆಗಮಿಸಿದ ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ ಕೂಡಲೇ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆಯನ್ನು ಮಾಡಿದರು, ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ: Crime News: ನಿಧಿ ಆಸೆಗೆ ನರಬಲಿ
ಮಾರ್ಗದ ಕೆಲಸ ಮಾಡುವ ಗುತ್ತಿಗೆ ದಾರರ ಕೆಲವು ತಪ್ಪುಗಳಿಂದ ಅಪಘಾತ ಹೆಚ್ಚುತ್ತಿದೆ. ನರಿಮೊಗರು ಶಾಲಾ ಬಳಿ ಇರುವ 80 ವರ್ಷ ಹಳೆಯ ಕಟ್ಟಡ ಮಾರ್ಗಕ್ಕೆ ಹೊಂದಿಕೊಂಡು ಇರುವುದರಿಂದ ಮಾರ್ಗದ ಅಗಲ ಕಡಿಮೆ ಆಗಿ ಮುಂದೆ ಬರುವ ವಾಹನ ಕಾಣದೆ ಇರುವುದು ಅಪಘಾತಕ್ಕೆ ಕಾರಣ ಮತ್ತು ಸ್ಪೀಡ್ ಬ್ರೇಕರ್ ಅಳವಡಿಸಲಾಗಿದೆ,


ಆದ್ರೆ ಕಡಿಮೆ ರೇಖೆಗಳನ್ನು ಹಾಕಿರುವುದು ಇನ್ನು ಹೆಚ್ಚಿನ ಸ್ಪೀಡ್ ಬ್ರೇಕರ್ ಲೈನ್ ಅನ್ನು ಮತ್ತೆ ಹತ್ತಿರ ಹಾಕಬೇಕು. ಅನ್ನೋದು ಸಾರ್ವಜನಿಕರ ಅಭಿಪ್ರಾಯ ಆಗಿರುತ್ತದೆ. ತಕ್ಷಣವೇ ವಾಹನ ಸವಾರಿಗೆ ತೊಂದರೆ ಆಗುವ ಪಾಲು ಬಿದ್ದ ಕಟ್ಟಡವನ್ನು ತೆರವು ಗೊಳಿಸಲು ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ ನರಿಮೊಗರು ಗುತ್ತಿಗೆದಾರರನ್ನು ಅಗ್ರಹಿಸಿದ್ದಾರೆ. ಈಗಾಗಲೇ 3 ತಿಂಗಳ ಅಂತರದಲ್ಲಿ ಅಪಘಾತ 20 ನೆಯದ್ದಾಗಿರುತ್ತದೆ, 2 ಸಾವು ಸಂಭವಿಸಿದೆ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಗಮನಹರಿಸಿಬೇಕು ಎಂದು ನಾಗರೀಕರು ಒತ್ತಾಯಿಸಿದ್ದಾರೆ.


