ಉತ್ತರ ಕನ್ನಡ:(ಜು.16) ಉತ್ತರ ಕನ್ನಡದ ಜಿಲ್ಲೆಯಲ್ಲಿ ಸುರಿಯುತ್ತಿರುವ ರಣಭೀಕರ ಮಳೆಯಿಂದಾಗಿ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ ಕುಸಿತವಾಗಿದೆ.
ಇದರಿಂದ ಹೆದ್ದಾರಿಯಲ್ಲಿ ಹೋಗುತ್ತಿದ್ದ ಕಾರು ಮಣ್ಣಿನಡಿಗೆ ಸಿಲುಕಿದ್ದು, ಒಂದೇ ಕುಟುಂಬದ ಐವರು ಸಾವ್ನಪ್ಪಿದ ಶಂಕೆಯಿದೆ. ಇನ್ನು ಇದೇ ಹೆದ್ದಾರಿಯಲ್ಲಿ ಸಾಗುತ್ತಿದ್ದ ಎಲ್‌ಪಿಜಿ ಗ್ಯಾಸ್ ಟ್ಯಾಂಕರ್ ಗುಡ್ಡ ಕುಸಿತದ ರಭಸಕ್ಕೆ ಪ್ರಪಾತಕ್ಕೆ ಬಿದ್ದು, ಪಕ್ಕದಲ್ಲಿ ಹರಿಯುತ್ತಿದ್ದ ನದಿಗೆ ಉರುಳಿ ಬಿದ್ದಿದೆ.
ಇದರಲ್ಲಿದ್ದ ಡ್ರೈವರ್ ಮತ್ತು ಕ್ಲೀನರ್ ಕೂಡ ನಾಪತ್ತೆ ಆಗಿದ್ದಾರೆ. ಒಟ್ಟಾರೆ 9 ಮಂದಿ ಸಾವನ್ನಪ್ಪಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ;https://uplustv.com/2024/07/16/guruwayanakere-a-dangerous-
ಇನ್ನು ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿತದಡಿ 5ಕ್ಕಿಂತ ಹೆಚ್ಚು ಜನರು ಮಣ್ಣಿನಡಿ ಸಿಲುಕಿರುವ ಶಂಕೆಯಿದೆ. ಕಾರಿನಲ್ಲಿ ಹೋಗುತ್ತಿದ್ದ ಒಂದೇ ಕುಟುಂಬದ ಲಕ್ಷ್ಮಣ ನಾಯ್ಕ (47), ಶಾಂತಿ ನಾಯ್ಕ (36), ರೋಶನ್ (11),ಆವಂತಿಕ (6), ಜಗನ್ನಾಥ (55) ಮಣ್ಣಿನಡಿ ಸಿಲುಕಿ ಸಾವಿಗೀಡಾಗಿರುವ ಶಂಕೆಯಿದೆ.
ಮಣ್ಣು ತೆರವು ಕಾರ್ಯಾಚರಣೆ ಇನ್ನು ಮೇಲೆ ಪ್ರಾರಂಭವಾಗಬೇಕಿದೆ. ಇನ್ನು ಈ ಗುಡ್ಡ ಕುಸಿತದಿಂದ ಒಟ್ಟು 9 ಜನ ಸಾವನ್ನಪ್ಪಿರುವ ಶಂಕೆಯಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಕಾರಿನಲ್ಲಿದ್ದ 5 ಜನರು ಸೇರಿ, ಗುಡ್ಡ ಕುಸಿತಕ್ಕೆ ಸಿಲುಕಿ ಪಕ್ಕದಲ್ಲಿ ಉಕ್ಕಿ ಹರಿಯುತ್ತಿದ್ದ ನದಿಗೆ ಎಲ್‌ಪಿಜಿ ಗ್ಯಾಸ್ ಟ್ಯಾಂಕರ್ ಬಿದ್ದಿದೆ. ಅದರಲ್ಲಿದ್ದ ಡ್ರೈವರ್, ಕ್ಲೀನರ್ ಹಾಗೂ ಇಬ್ಬರು ಇತರೆ ಪ್ರಯಾಣಿಕರು ನದಿಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಅಂಕೋಲಾ ಬಳಿಯ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಟ್ಯಾಂಕರ್ ಚಾಲಕ ಹಾಗೂ ಕ್ಲೀನರ್ ಟೀ ಕುಡಿಯುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಗುಡ್ಡ ಕುಸಿತದ ರಭಸಕ್ಕೆ ಗ್ಯಾಸ್ ಟ್ಯಾಂಕರ್ ನದಿಗೆ ಬಿದ್ದಿದೆ.
ಟ್ಯಾಂಕರ್ ಚಾಲಕ, ಕ್ಲೀನರ್ ಸೇರಿ ನಾಲ್ವರು ನಾಪತ್ತೆ ಆಗಿದ್ದಾರೆ. ಶಿರೂರು ಬಳಿ ಸಣ್ಣ ಕ್ಯಾಂಟೀನ್‌ನಲ್ಲಿ ಟೀ ಕುಡಿಯುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಇನ್ನು ನಾಲ್ವರು ಮಣ್ಣಿನ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದ ಶಂಕೆಯಿದೆ.
ಜಿಲ್ಲಾಡಳಿತದಿಂದ ಹೆದ್ದಾರಿ ಮೇಲಿನ ಮಣ್ಣಿನ ತೆರವು ಕಾರ್ಯಾಚರಣೆ ಪ್ರಾರಂಭವಾಗಲಿದೆ.