Sun. Feb 23rd, 2025

Belthangadi: ಮೊಗ್ರು ಮುಗೇರಡ್ಕ “ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್” ಬೆಳ್ಳಿಹಬ್ಬ ಪ್ರಯುಕ್ತ “ರಜತ ಪಥ” ಕಾರ್ಯಕ್ರಮ

ಬೆಳ್ತಂಗಡಿ :(ಫೆ.18) ರಾಮನೇ ನಮ್ಮ ದೇಶ , ರಾಮನೇ ನಮ್ಮ ಧರ್ಮ, ರಾಮನೇ ನಮ್ಮ ಸಂಸ್ಕೃತಿ, ರಾಮನೇ ನಮ್ಮ ಧೈರ್ಯ ರಾಮನೇ ನಮ್ಮ ಪರಾಕ್ರಮ, ರಾಮನೇ ನಮ್ಮಸರ್ವಸ್ವ, ರಾಮನೇ ನಮ್ಮ ಅಸ್ತಿತ್ವ, ಸಮಾಜದ ಯಾವುದೇ ಮುಖದಲ್ಲಿ ನೋಡಿದರೂ ಶ್ರೀರಾಮಚಂದ್ರ ಸರ್ವ ಶ್ರೇಷ್ಠ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

ಇದನ್ನೂ ಓದಿ: ಸುರತ್ಕಲ್‌ : ಮದುವೆ ಸಮಾರಂಭಕ್ಕೆ ಅಂತಾ ನೀಡಿದ ಫಾರ್ಚುನರ್‌ ಕಾರನ್ನು ಸೇಲ್‌ ಮಾಡಿದ ಸ್ನೇಹಿತ


ಅವರು ಮೊಗ್ರು ಗ್ರಾಮದ ಅಲೆಕ್ಕಿ-ಮುಗೇರಡ್ಕ ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ (ರಿ.) ಇದರ ಬೆಳ್ಳಿಹಬ್ಬದ ಸವಿ ನೆನಪಿಗಾಗಿ ಇಲ್ಲಿನ ಶ್ರೀ ರಾಮ ಶಿಶುಮಂದಿರ ವಠಾರದಲ್ಲಿ ಫೆ15ರಂದು ನೆರವೇರಿದ ‘ರಜತ ಪಥ’ ಸಭಾಕಾರ್ಯಕ್ರಮವನ್ನು ಮುಖ್ಯ ಅತಿಥಿಯಾದ ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು.


ಯುವ ಉದ್ಯಮಿ ಕಿರಣ್ ಚಂದ್ರ ಡಿ ಪುಷ್ಪಗಿರಿ ಅಧ್ಯಕ್ಷತೆವಹಿಸಿದ್ದರು. ವೇದಿಕೆಯಲ್ಲಿ ಉಪ್ಪಿನಂಗಡಿ ಶ್ರೀ ರಾಮ ಶಾಲೆಯ ಸಂಚಾಲಕ ಯು.ಜಿ.ರಾಧ, ಸಿ.ಎ.ಬ್ಯಾಂಕ್ ನಿಕಟಪೂರ್ವ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಗ್ರಾ.ಪಂ. ಅಧ್ಯಕ್ಷ ದಿನೇಶ್ ಖಂಡಿಗ, ಉಪಾಧ್ಯಕ್ಷ ಗಂಗಾಧರ ಪೂಜಾರಿ, ಮುಗೇರಡ್ಕ ದೈವಸ್ಥಾನದ ಆಡಳಿತ ಮೊಕ್ತೇಸರರಾದ ರಾಮಣ್ಣ ಗೌಡ ದೇವಸ್ಯಗುತ್ತು, ಮನೋಹರ ಗೌಡ ಅಂತರ, ಪ್ರಶಸ್ತಿ ಪುರಷ್ಕೃತ ಕೃಷಿಕ
ದೇವಿಪ್ರಸಾದ್ ಕಡಮ್ಮಾಜೆ, ಗೌರವಾಧ್ಯಕ್ಷ ಉದಯ ಭಟ್, ಅಧ್ಯಕ್ಷ ರಮೇಶ್ ಎನ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.


ವಿವಿಧ ಕ್ಷೇತ್ರದ ಸಾಧಕರ ಸಾಧನೆ ಕಾರ್ಯ ಚಟುವಟಿಕೆಗಳ ಸಾಕ್ಷ್ಯಚಿತ್ರಗಳನ್ನು ಸ್ಕ್ರೀನ್ ಮೂಲಕ ಅನಾವರಣಗೊಳಿಸುವ ಮೂಲಕ ಸಾಧಕರನ್ನು ಸನ್ಮಾನಿಸಲಾಯಿತು.


ಶ್ರೀ ರಾಮ ಶಿಶುಮಂದಿರದ ಪುಟಾಣಿಗಳಿಂದ ಹಾಗೂ ಪೋಷಕರಿಂದ ರೂಪಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಬಳಿಕ ‘ಪರಮಾತ್ಮೆ ಪಂಜುರ್ಲಿ’ ಪ್ರದರ್ಶನಗೊಂಡಿತು.


ಪದಾಧಿಕಾರಿಗಳು, ಮಾತೃಮಂಡಳಿ, ಮಾತಾಜಿಯರು, ಪೋಷಕರು, ವಿದ್ಯಾಭಿಮಾನಿಗಳು ಪಾಲ್ಗೊಂಡರು. ಸತೀಶ್ ಹೊಸ್ಮಾರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಮಾಧವ ಗೌಡ ಸ್ವಾಗತಿಸಿ , ಬೆಳ್ಳಿಹಬ್ಬ ಸಮಿತಿ‌ ಉಪಾಧ್ಯಕ್ಷ ಭರತೇಶ್ ವಂದಿಸಿದರು.

Leave a Reply

Your email address will not be published. Required fields are marked *