ಉಪ್ಪಿನಂಗಡಿ :(ಫೆ.20) ಅಲ್ಯೂಮಿನಿಯಂ ದೋಟಿಗೆ ವಿದ್ಯುತ್ ತಂತಿ ಸ್ಪರ್ಶಗೊಂಡು ತೋಟದ ಕಾರ್ಮಿಕ ಸಾವನ್ನಪ್ಪಿದ ಘಟನೆ ಬಜತ್ತೂರು ಗ್ರಾಮದ ಕುವೆಚ್ಚಾರ್ ಎಂಬಲ್ಲಿ ನಡೆದಿದೆ.

ಇದನ್ನೂ ಓದಿ: ಉಜಿರೆ: ಅರಿಪ್ಪಾಡಿ ಸಂಸ್ಥಾಪಕ, ಯುವ ಉದ್ಯಮಿಗಳಿಗೆ ಸ್ಫೂರ್ತಿಯಾಗಿದ್ದ ಬಾಲಕೃಷ್ಣ ಅರಿಪಡಿತ್ತಾಯ ನಿಧನ
ದಾವಣಗೆರೆ ಮೂಲದ ವೀರಭದ್ರ (29) ಮೃತ ವ್ಯಕ್ತಿ.
ತೋಟದಲ್ಲಿ ದೋಟಿ ಬಳಸಿ ಸೀಯಾಳ ಕೇಳುತ್ತಿರುವಾಗ ಅಲ್ಯೂಮಿನಿಯಂ ದೋಟಿಗೆ ವಿದ್ಯುತ್ ತಂತಿ ಸ್ಪರ್ಶಗೊಂಡಿದೆ.



ಕುವೆಚ್ಚಾರ್ ತೋಟದಲ್ಲಿ ಕರ್ತವ್ಯ ನಿರ್ವಸುತ್ತಿದ್ದ ವೇಳೆ ತೋಟದಲ್ಲಿದ್ದ ತೆಂಗಿನ ಮರದಿಂದ ಸೀಯಾಳವೊಂದನ್ನು ಕೀಳಲೆಂದು ದೋಟಿ ಬಳಸಲು ಮುಂದಾದಾಗ ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ದೋಟಿಗೆ ಸ್ಪರ್ಶವಾಗಿ ವೀರಭದ್ರ ವಿದ್ಯುತ್ ಆಘಾತಕ್ಕೊಳಗಾದರು.

ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ, ಅಲ್ಲಿ ಅವರು ಮೃತಪಟ್ಟರೆಂದು ತಿಳಿದುಬಂದಿದೆ.
ಮೃತ ವೀರಭದ್ರ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಪಲ್ಲಾಗಟ್ಟೆ ಮನೆ ನಿವಾಸಿ ಗುತ್ಯಪ್ಪ ಎಂಬವರ ಮಗನಾಗಿದ್ದು, ತೋಟದ ಕಾರ್ಮಿಕನಾಗಿ ಕುವೆಚ್ಚಾರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಗುತ್ಯಪ್ಪರವರು ನೀಡಿದ ದೂರಿನ ಅನುಸಾರ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
