ಕಲ್ಮಂಜ: (ಫೆ.24) ಕಲ್ಮಂಜ ಗ್ರಾಮದ ಅಲೆಕ್ಕಿ ಎಂಬಲ್ಲಿಯ ಬದಿನಡೆ ಕ್ಷೇತ್ರ ಬಹಳ ಪುರಾತನವಾಗಿದ್ದು ಅಲ್ಲಿ ಅಷ್ಟ ಕಂಬಗಳಿರುವ ಕುರುಹುಗಳು ಹಳೆಯ ಕಾಲದ ಕೆಂಪುಕಲ್ಲು ಹಾಗೂ ಇನ್ನಿತರ ಕುರುಹುಗಳು ದೊರಕಿದೆ. ಈ ಕ್ಷೇತ್ರವು ಮಾಗಣೆ ಗೆ ಸಂಬಂಧಪಟ್ಟಿದೆ ಎಂಬ ಪ್ರತೀತಿ ಇದೆ ಇದರ ಸಲುವಾಗಿ ಜೀರ್ಣೋದ್ದಾರ ಮಾಡುವ ಉದ್ದೇಶದಿಂದ 23/2/2025 ಆದಿತ್ಯವಾರದಂದು ಸಭೆ ಕರೆಯಲಾಗಿತ್ತು.

ಇದನ್ನೂ ಓದಿ: ಪುತ್ತೂರು: ಖಾಸಗಿ ಆಸ್ಪತ್ರೆ ವೈದ್ಯರ ಎಡವಟ್ಟು
ಮಾಗಣೆಯ ಬದಿನಡೆ ಕ್ಷೇತ್ರದಲ್ಲಿ ನಡೆದಂತಹ ಸಮಸ್ತರ ಸಭೆಯಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಮಾಡುವ ನಿಟ್ಟಿನಲ್ಲಿ ಚರ್ಚಿಸಲಾಯಿತು. ಇದಕ್ಕೆ ಪೂರಕವಾಗಿ ಜೀರ್ಣೋದ್ಧಾರ ಸಮಿತಿಯನ್ನ ರಚಿಸಲಾಗಿದ್ದು ಇದರ ಗೌರವಾಧ್ಯಕ್ಷರಾಗಿ ಶ್ರೀ ಗುರುದೇವ ಮಠದ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಅಲಂಕರಿಸಿದ್ದು ,


ಅಧ್ಯಕ್ಷರಾಗಿ ಶ್ರೀ ತುಕಾರಾಮ್ ಸಾಲಿಯಾನ್, ಕಾರ್ಯದರ್ಶಿಯಾಗಿ ಶ್ರೀ ಸುನಿಲ್ ಪೂಜಾರಿ, ಕೋಶಾಧಿಕಾರಿಯಾಗಿ ಶ್ರೀ ಮಂಜುನಾಥ ಗುಡಿಗಾರ್ ಹಾಗೂ ಗೌರವ ಸಲಹೆಗಾರರಾಗಿ ಶ್ರೀ ಕೃಷ್ಣಪ್ಪ ಗುಡಿಗಾರ್ ಅಲೆಕ್ಕಿ,

ಶ್ರೀ ರವಿ ಭಟ್, ಶ್ರೀ ಅನಂತೇಶ ಚಡಗ, ಶ್ರೀ ವೆಂಕಟರಮಣ ಹೆಬ್ಬಾರ್, ಶ್ರೀ ರಾಜೇಶ ಹೊಳ್ಳ, ಪಜಿರಡ್ಕ, ಶ್ರೀ ಶೇಖರ ಗೌಡ ಗುಲ್ಲೊಡಿ, ಶ್ರೀ ಬಾಲಚಂದ್ರ ರಾವ್, ಗುತ್ತು ಮನೆ ಪಜಿರಡ್ಕ, ಶ್ರೀ ಕಿರಣ್ ಖಾಡಿಲ್ಕರ್ ಮುಂಡಾಜೆ, ಸಂಘಟನಾ ಕಾರ್ಯದರ್ಶಿಯಾಗಿ ರಾಘವೇಂದ್ರ ಹುಂಕ್ರೊಟ್ಟು ಪದಾಧಿಕಾರಿಗಳಾಗಿ ನೇಮಕಗೊಂಡಿರುತ್ತಾರೆ.

ಈ ಸಮಿತಿಯ ನೇತೃತ್ವ ಮತ್ತು ಭಕ್ತರ ಸಹಕಾರದಲ್ಲಿ ಕ್ಷೇತ್ರದ ಸಂಪೂರ್ಣ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತದೆ.
