ವೇಣೂರು:(ಫೆ.25) ರಸ್ತೆ ಬದಿಯಲ್ಲಿ ನಿಂತಿದ್ದ ಬಾಲಕನಿಗೆ ಕಾರು ಡಿಕ್ಕಿ ಹೊಡೆದ ಘಟನೆ ವೇಣೂರಿನ ಅಂಡಿಂಜೆಯಲ್ಲಿ ಫೆ. 24ರಂದು ಸಂಜೆ ನಡೆದಿದೆ.

ಇದನ್ನೂ ಓದಿ: ಮಂಗಳೂರು: ಜಾಗ್ವಾರ್ ಯುದ್ದ ವಿಮಾನಕ್ಕೆ ಪೈಲಟ್ ಆದ ಮಂಗಳೂರಿನ ಹುಡುಗಿ!!
ಕಾರು ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಬಾಲಕನ್ನು ಆಸ್ಪತ್ರೆಗೆ ಕೊಂಡೊಯ್ದರೂ ಆ ವೇಳೆಗೆ ಬಾಲಕ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ.




ಮೃತ ಬಾಲಕ ಅಂಡಿಂಜೆ ಗ್ರಾಮದ ನಿವಾಸಿ ದಿನೇಶ್ ಶರ್ಮ ಎಂಬವರ ಪುತ್ರ ಇಮಾಂಶು ಶರ್ಮ(5 ವ) ಎಂದು ತಿಳಿದುಬಂದಿದೆ.
ಘಟನೆಯ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
