Mon. Mar 10th, 2025

Belthangady: ಸಿಯೋನ್ ಆಶ್ರಮಕ್ಕೆ ಮೂಡಿಗೆರೆಯ ಕೂಲಿ ಕಾರ್ಮಿಕರ ತಂಡ ಭೇಟಿ – ದಿನಗೂಲಿಗರಿಂದ ಆಶ್ರಮಕ್ಕೆ ಧನ ಸಹಾಯ

ಬೆಳ್ತಂಗಡಿ :(ಮಾ.4) ದೇಶದ ನಾನಾ ಭಾಗದ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ 450 ಕ್ಕೂ ಅಧಿಕ ನಿರ್ಗತಿಕರು ,ಅನಾಥರು, ವಿಕಲ ಚೇತನರು, ವಯೋ ವೃದ್ಧರು, ಹಾದಿ ಬೀದಿಯಲ್ಲಿ ಸಿಕ್ಕವರು ಮತ್ತು ಮಾನಸಿಕ ಖಾಯಿಲೆಗಳಿಗೆ ತುತ್ತಾಗಿರುವ ಸಾವಿರಾರು ಜನರನ್ನು ಕಳೆದ 25 ವರ್ಷಗಳಿಂದ ಆಶ್ರಯ ನೀಡಿ ಪೋಷಿಸುತ್ತಿರುವ ಕಕ್ಕಿಂಜೆಯ ಗಂಡಿಬಾಗಿಲಿನಲ್ಲಿರುವ ಸಿಯೋನ್ ಆಶ್ರಮಕ್ಕೆ ಮೂಡಿಗೆರೆಯ ಕಾಫಿ ತೋಟದ ದಿನಗೂಲಿ ಕಾರ್ಮಿಕರ ತಂಡ ಭೇಟಿ ನೀಡಿದರು.

ಇದನ್ನೂ ಓದಿ: ಉಜಿರೆ: ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ

ಈ ವೇಳೆ ಆಶ್ರಮದ ಪ್ರತಿಯೊಂದು ಕೊಠಡಿಗೂ ಭೇಟಿ ನೀಡಿ ಆಶ್ರಮದ ನಿವಾಸಿಗಳೊಂದಿಗೆ ಕುಶಲ ಕ್ಷೇಮ ವಿಚರಿಸಲಾಯಿತು. 4 ತಾಸಿಗು ಅಧಿಕ ಸಮಯವನ್ನು ಇವರೊಂದಿಗೆ ಕಳೆಯಲಾಯಿತು.

ಈ ಸಂದರ್ಭದಲ್ಲಿ ಸಿಯೋನ್ ಆಶ್ರಮದ ಸಂಸ್ಥಾಪಕ ಮತ್ತು ಮೇಲ್ವೀಚಾರಕರಾದ ಡಾ. ಯು ಸಿ ಪೌಲೋಸ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಡಾ.ಯು.ಸಿ ಪೌಲೋಸ್, ಇದು ಬರಿಯ ನನ್ನ ಆಶ್ರಮವಲ್ಲ, ಇದು ನಮ್ಮೆಲ್ಲರ ಆಶ್ರಮ. ಇದಕ್ಕೆ ಸಮಾಜದ ಸರ್ವರ ಕೈ ಜೋಡಿಸುವಿಕೆ ಅಗತ್ಯವಿದೆ. ಸಮಾಜದಿಂದ ಮೂಲೆ ಗುಂಪಾಗುವ ಇಂತಹ ವಿಶೇಷ ಜನರಿಗೆ ವ್ಯವಸ್ಥಿತವಾದ ಆಹಾರ, ಆರೋಗ್ಯ ಮತ್ತು ಆಶ್ರಯವನ್ನು ಕಲ್ಪಿಸಿ ಕೊಡುವುದೆ ನಮ್ಮ ಉದ್ದೇಶ. ಈ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ನಮ್ಮ ಜೊತೆಯಲ್ಲಿ ಸದಾ ನಿಂತಿದೆ ಎಂದು ನೆನಪಿಸಿಕೊಂಡರು. ಇದೇ ಸಂದರ್ಭದಲ್ಲಿ ಚಿಕ್ಕಮಗಳೂರಿನ ಮೂಡಿಗೆರೆಯಿಂದ ಆಗಮಿಸಿದ ಕಾಫಿ ತೋಟದ ಕೂಲಿಗರ ತಂಡಕ್ಕೆ ಸಂತಸ ಮತ್ತು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.

ಇದರ ಜೊತೆಗೆ ಎಲ್ಲರ ಒಗ್ಗಟ್ಟಿನಿಂದ ಆಶ್ರಮದ ಆಡಳಿತ ಮಂಡಳಿಗೆ ಧನ ಸಹಾಯವನ್ನು ಮಾಡಲಾಯಿತು. 35 ಕೆಜಿ ಕಲ್ಲಂಗಡಿ ಹಣ್ಣನ್ನು ಸಹ ಆಶ್ರಮದ ನಿವಾಸಿಗಳಿಗೆ ನೀಡಲಾಯಿತು.

ನೂರಾರು ವಯೋವೃದ್ಧರು ಮತ್ತು ಮಾನಸಿಕ ಅಸಹಜತೆವುಳ್ಳವರನ್ನು ಕಳೆದ 25 ವರ್ಷಗಳಿಂದ ಸಾಕಿ ಸಲವುತ್ತಿರುವುದು ನಿಜಕ್ಕೂ ಅಸಾಧಾರಣ ಕಾರ್ಯ. ಸರ್ಕಾರ ಸೇರಿದಂತೆ ಇತರೆ ಸಂಘ ಸಂಸ್ಥೆಗಳು ಇಂತಹ ಸೇವಾ ಕಾರ್ಯಕ್ಕೆ ಕೈ ಜೋಡಿಸಬೇಕು. ಮಾನಸಿಕ ಮತ್ತು ದೈಹಿಕ ನೂನ್ಯತೆ ಹೊಂದಿರುವವರು ಕೂಡ ಸಮಾಜದ ಒಂದು ಭಾಗ ಎಂದು ಪರಿಗಣಿಸಬೇಕು.ಅವರ ಬದುಕಿಗೂ ಜೀವ ತುಂಬಬೇಕು ಎಂದು ಕೂಲಿ ಕಾರ್ಮಿಕರ ತಂಡದ ನಾಯಕ ಗಣೇಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಿಯೋನ್ ಆಶ್ರಮದ ಸಿಬ್ಬಂದಿ ವರ್ಗ ಸೇರಿದಂತೆ ಮೂಡಿಗೆರೆಯ ಚಂದ್ರಾಪುರ ಗ್ರಾಮದ ನಿವಾಸಿಗಳು ಮತ್ತು ಕಾಫಿ ತೋಟದ ದಿನಗೂಲಿಗರಾದ ತಂಡದ ನಾಯಕ ಗಣೇಶ್, ಹೂವಣ್ಣ, ರಮೇಶ್, ಸುರೇಶ್,ಅನಿಲ್ , ಪ್ರಶಾಂತ್, ಪ್ರವೀಣ, ಅರವಿಂದ, ಅಶೋಕ, ಕೃಷ್ಣ ಮತ್ತು ನಂದ ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *