Mon. Mar 10th, 2025

Bantwal: ಅಪ್ರಾಪ್ತ ವಯಸ್ಸಿನ ಮಗನಿಗೆ ಸ್ಕೂಟರ್ ನೀಡಿದ ತಂದೆಗೆ ಬಿತ್ತು ದಂಡ – ದಂಡದ ಮೊತ್ತವೆಷ್ಟು ಗೊತ್ತಾ?!

ಬಂಟ್ವಾಳ:(ಮಾ.6) ಅಪ್ರಾಪ್ತ ವಯಸ್ಸಿನ ಮಗನಿಗೆ ಸ್ಕೂಟರ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಡಿಷನಲ್ ಸಿವಿಲ್ ನ್ಯಾಯಾಲಯ ಹಾಗೂ ಜೆಎಂಎಫ್.ಸಿ ಬಂಟ್ವಾಳ ಆರೋಪಿ ತಂದೆಗೆ 26 ಸಾವಿರ ರೂ. ದಂಡ ವಿಧಿಸಿದೆ.

ಇದನ್ನೂ ಓದಿ: ಬೆಳ್ತಂಗಡಿ : ಗುರುದೇವ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ ನಿಧನ


ಬಿ.ಸಿ.ರೋಡು ಪರ್ಲಿಯಾದಲ್ಲಿ ಸ್ಥಳೀಯ ನಿವಾಸಿ ಸಮೀರ್ ಎಂಬಾತ ತನ್ನ ಸ್ಕೂಟರನ್ನು ಪುತ್ರನಿಗೆ ನೀಡಿದ್ದು, ಆತ ಸ್ಕೂಟರ್ ಚಾಲನೆ ಮಾಡುತ್ತಿರುವ ವೇಳೆ ಬಂಟ್ವಾಳ ಸಂಚಾರ ಪೊಲೀಸಿಗೆ ಸಿಕ್ಕಿ ಬಿದ್ದಿದ್ದನು.

ಈ ವೇಳೆ ಪೊಲೀಸರು ಆತನ ವಿರುದ್ಧ ಪ್ರಕರಣ‌ ದಾಖಲಿಸಿದ್ದರು. ಇದೀಗ ನ್ಯಾಯಾಲಯ ಸ್ಕೂಟರಿನ ಆರ್ ಸಿ ಓವರ್ ಆಗಿರುವ ತಂದೆಗೆ ದಂಡ ವಿಧಿಸಿದೆ.

    Leave a Reply

    Your email address will not be published. Required fields are marked *