Mon. Mar 10th, 2025

Bike accident: ಎರಡು ಬೈಕ್​ಗಳ ನಡುವೆ ಭೀಕರ ಅಪಘಾತ – ನಾಲ್ವರು ಯುವಕರು ಸ್ಪಾಟ್‌ ಡೆತ್

ಕಲಬುರಗಿ (ಮಾ.07): ಎರಡು ಬೈಕ್​ಗಳು ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಯುವಕರು ಸಾವನ್ನಪ್ಪಿರುವಂತಹ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ಬಳಿ ಸಂಭವಿಸಿದೆ.

ಇದನ್ನೂ ಓದಿ: ⭕Karnataka Budget 2025: ಬಜೆಟ್‌ನಲ್ಲಿ ಯಾವ ಇಲಾಖೆಗೆ ಎಷ್ಟು ಅನುದಾನ ಘೋಷಣೆ?

ಸಿದ್ದು, ಸರೇಶ್ ರೆಡ್ಡಿ, ಮಲ್ಲು ಪೂಜಾರಿ ಮತ್ತು ಪ್ರಕಾಶ್ ಪೂಜಾರಿ ಮೃತರು. ಸೇಡಂನಿಂದ ಆಬಾಳ್ ಕಡೆ ಹೊರಟಿದ್ದ ಒಂದು ಬೈಕ್​​ಗೆ ಎದುರಿಗೆ ಬಂದ ಮತ್ತೊಂದು ಬೈಕ್​​ ಡಿಕ್ಕಿ ಹೊಡೆದಿದೆ.

ಸದ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸೇಡಂ ಠಾಣೆಯ ಪೊಲೀಸರು ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *