Wed. Mar 12th, 2025

drug case: ರನ್ಯಾ ಬಳಿಕ ಸ್ಯಾಂಡಲ್​ವುಡ್​ನ ಇಬ್ಬರು ನಟಿಯರಿಗೆ ಸಿಸಿಬಿ ಶಾಕ್

drug case:(ಮಾ.12) ನಟಿ ರನ್ಯಾ, ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ರನ್ಯಾ ಪ್ರಕರಣ ಇದೀಗ ದೇಶದಾದ್ಯಂತ ಕುತೂಹಲ ಕೆರಳಿಸಿದೆ. ಪ್ರಕರಣದ ತನಿಖೆ ಆದಷ್ಟು ಕುತೂಹಲಕಾರಿ ವಿಷಯಗಳು ಹೊರಗೆ ಬರುತ್ತಿವೆ.

ಇದನ್ನೂ ಓದಿ: ⭕ಕೇರಳ: ಆಸ್ಪತ್ರೆಯ ಡ್ರೆಸ್ಸಿಂಗ್‌ ರೂಮ್‌ ನಲ್ಲಿ ಕ್ಯಾಮರಾ ಪತ್ತೆ

ರನ್ಯಾರ ಹಿಂದೆ ರಾಜಕಾರಣಿಗಳು, ಪೊಲೀಸ್ ಉನ್ನತ ಅಧಿಕಾರಿಗಳು ಇದ್ದಾರೆ ಎನ್ನಲಾಗುತ್ತಿದೆ. ನಟಿ ರನ್ಯಾರ ಮೇಲೆ ದೇಶದ ಗಮನ ಇಟ್ಟಿರುವಾಗಲೇ ಸ್ಯಾಂಡಲ್​ವುಡ್​ನ ಇನ್ನಿಬ್ಬರು ನಟಿಯರಿಗೆ ಸಂಕಷ್ಟ ಶುರುವಾಗಿದೆ. ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಎಫ್​ಐಆರ್ ರದ್ದು ಪ್ರಶ್ನಿಸಿ ಸಿಸಿಬಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲಾಗುತ್ತಿದೆ.

2020 ರಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಯನ್ನು ಪೊಲೀಸರು ಬಂಧಿಸಿದ್ದರು. ನಟಿಯರು ತಮ್ಮ ವಿರುದ್ಧ ದಾಖಲಾಗಿದ್ದ ಎಫ್​ಐಆರ್ ರದ್ದು ಕೋರಿ ಅರ್ಜಿ ಹಾಕಿದ್ದರು. ಅಲ್ಲದೆ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್, ರಾಗಿಣಿ ವಿರುದ್ಧ ಪ್ರಕರಣವನ್ನು ಸಾಕ್ಷ್ಯಗಳ ಕೊರತೆಯಿಂದಾಗಿ ರದ್ದು ಮಾಡಿತ್ತು. ಸಂಜನಾ ವಿರುದ್ಧ ದಾಖಲಾಗಿದ್ದ ಎಫ್​ಐಆರ್ ಸಹ ರದ್ದಾಗಿತ್ತು.

ಇದೀಗ ಸಿಸಿಬಿಯು ಹೈಕೋರ್ಟ್​ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಿದೆ. ಗೃಹ ಇಲಾಖೆ ಮತ್ತು ಕಾನೂನು ಇಲಾಖೆಯ ಸಮ್ಮತಿ ಮೇರೆಗೆ ಇಬ್ಬರು ನಟಿಯರ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.

ಈ ಹಿಂದೆ ದರ್ಶನ್ ಪ್ರಕರಣದಲ್ಲಿಯೂ ಸಹ ರಾಜ್ಯ ಪೊಲೀಸರು ಹೈಕೋರ್ಟ್​ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಅದರಿಂದ ಹೆಚ್ಚಿನ ಉಪಯೋಗವೇನೂ ಆದಂತಿಲ್ಲ. ಇದೀಗ ಐದು ವರ್ಷ ಹಳೆಯ ಪ್ರಕರಣದ ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *