Thu. Mar 13th, 2025

Kolar: ಕಾಮದ ತೀಟೆಗೆ ಮಗಳನ್ನೇ ಬಳಸಿಕೊಂಡ ತಂದೆ – ವಿಕೃತಕಾಮಿ ತಂದೆ ಅರೆಸ್ಟ್!!

ಕೋಲಾರ: (ಮಾ.13) ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ಪೈಶಾಚಿಕ ಕೃತ್ಯ ನಡೆದಿದೆ. ಅಪ್ಪಯ್ಯಪ್ಪ ಎನ್ನುವ ವ್ಯಕ್ತಿ ತನ್ನ 20 ವರ್ಷದ ಮಗಳ ಮೇಲೆ 5 ತಿಂಗಳಿನಿಂದ ನಿರಂತರ ಅತ್ಯಾಚಾರ ಎಸಗಿದ್ದಾನೆ.

ಇದನ್ನೂ ಓದಿ: 🟠ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ “ಉದ್ಘೋಷ” ಪತ್ರಿಕೆ ಬಿಡುಗಡೆ ಕಾರ್ಯಕ್ರಮ

ಪರಿಣಾಮ ಮಗಳು ಗರ್ಭಿಣಿಯಾಗಿದ್ದಾಳೆ. ಯುವತಿ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಹೋದಾಗ ತಂದೆಯ ವಿಕೃತ ಕಾಮ ಬೆಳಕಿಗೆ ಬಂದಿದೆ.

ಅಪ್ಪಯ್ಯಪ್ಪಗೆ ಮೂರು ಹೆಣ್ಣು ಒಂದು ಗಂಡು ಮಗು ಇದ್ದು, ತಾಯಿ ಇಲ್ಲದ ಮಕ್ಕಳನ್ನು ತಾನೇ ನೋಡಿಕೊಳ್ಳುತ್ತಿದ್ದ. ಮೊದಲ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಟ್ಟಿದ್ದಾನೆ.

ಆದ್ರೆ, 20 ವರ್ಷದ ಮೂರನೇ ಮಗಳ ಮೇಲೆ ತನ್ನ ಕಾಮದ ತೀಟೆ ತೀರಿಸಿಕೊಂಡಿದ್ದಾನೆ. ಮಗಳು ಎನ್ನುವುದನ್ನು ನೋಡದೇ ನಿರಂತರವಾಗಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಯುವತಿ ಗರ್ಭಿಣಿಯಾಗಿದ್ದಾಳೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ಪಯ್ಯಪ್ಪ ವಿರುದ್ಧ ದೂರು ನೀಡಿದ್ದು, ಈ ದೂರಿನ ಮೇರೆಗೆ ಕಾಮಸಮುದ್ರ ಪೊಲೀಸರು ಅಪ್ಪಯ್ಯಪ್ಪನನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *