ಬೆಳ್ತಂಗಡಿ:(ಎ.1)ಅಂಡಿಂಜೆ ನಿವಾಸಿ ಮಂಗಳಾದೇವಿ ಮೇಳದ ಯಕ್ಷಗಾನ ಭಾಗವತರಾದ ಸತೀಶ್ ಆಚಾರ್ಯ ರವರು ಅಪಘಾತದಲ್ಲಿ ಮೃತಪಟ್ಟಿದ್ದು, ದಿವಂಗತರ ಮನೆಗೆ ಮಾಜಿ ಸಚಿವ ರಮಾನಾಥ್ ರೈ ರವರು ಮನೆಗೆ ಭೇಟಿ ನೀಡಿ ಸತೀಶ್ ಆಚಾರ್ಯ ತಾಯಿಗೆ ಸಾಂತ್ವನ ಹೇಳಿದರು.

ಇದನ್ನೂ ಓದಿ: ⭕ಬ್ರಹ್ಮಾವರ: ರಸ್ತೆ ದಾಟುತ್ತಿದ್ದ ಶಾಲಾ ಬಾಲಕನಿಗೆ ಕಾರು ಡಿಕ್ಕಿ
ಏನಿದು ಘಟನೆ?
ಮಂಗಳಾದೇವಿ ಯಕ್ಷಗಾನ ಮೇಳದ ಯಕ್ಷಗಾನ ಭಾಗವತರಾದ ಸತೀಶ್ ಆಚಾರ್ಯ ರವರು ಮಾ. 31ರಂದು ಸುಳ್ಯದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮವನ್ನು ಮುಗಿಸಿ ಮುಂಜಾನೆ 4 ಗಂಟೆಗೆ ಅವರುತಮ್ಮ ಬೈಕ್‌ನಲ್ಲಿ ನಾರಾವಿಯಿಂದ ಅಂಡಿಂಜೆಗೆ ಬರುತ್ತಿರುವ ಸಂದರ್ಭದಲ್ಲಿ


ಅಂಡಿಂಜೆ ಕಿಲಾರ ಮಾರಿಗುಡಿ ದೇವಸ್ಥಾನದ ಸಮೀಪದ ತಿರುವು ರಸ್ತೆಯಲ್ಲಿ ಎದುರಿನಿಂದ ಬರುತ್ತಿದ್ದ ಬೈಕ್ ಹಾಗೂ ಇವರು ಹೋಗುತ್ತಿದ್ದ ಬೈಕ್ ಪರಸ್ಪರ ಡಿಕ್ಕಿ ಹೊಡೆದುಕೊಂಡು ಈ ದುರ್ಘಟನೆ ನಡೆದಿದೆ. ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.


