ಬೆಳ್ತಂಗಡಿ:(ಮೇ.1) ಗಾಳಿ ಮಳೆಯಿಂದ ಮನೆ ಹಾನಿಗೊಳಗಾದ ಚಾರ್ಮಾಡಿ ಗ್ರಾಮದ ಮುದ್ದೊಟ್ಟು ಮುಡಿಪು ಅರ್ಕನ ಮಸೀದಿಯ ಧರ್ಮಗುರುಗಳಾದ, ಸಮೀರ್ ಮುಸ್ಲಿಯರ್, ಮತ್ತು ವಲಸರಿ ದಿನೇಶ್ ಪೂಜಾರಿಯವರಿಗೆ ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ವತಿಯಿಂದ ಆರ್ಥಿಕ ನೆರವನ್ನು ಹಸ್ತಾಂತರಿಸಲಾಯಿತು.

ಇದನ್ನೂ ಓದಿ: 🟣ಉಜಿರೆ: ಭಾಗವತ ಧರ್ಮ ರಕ್ಷಣಾ ವೇದಿಕೆಯ ಪದಾಧಿಕಾರಿಗಳ ಆಯ್ಕೆ
ಈ ಸಂದರ್ಭದಲ್ಲಿ ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ನ ಸದಸ್ಯರಾದ ಪ್ರವೀಣ್ ಹಳ್ಳಿ ಮನೆ, ಯುವ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷರಾದ ಅಝರ್ ನಾವೂರು, ಯುವ ಕಾಂಗ್ರೆಸ್ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾದ ಅರುಣ್ ಲೋಬೊ,
ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗದ ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ಯಶೋಧರ್ ಚಾರ್ಮಾಡಿ, ಹಾಗೂ ಚಾರ್ಮಾಡಿ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಇಮ್ರಾನ್,ಪ್ರಮುಖರಾದಸಂಶುದ್ದೀನ್ ಡಿ.ಕೆ , ನಿತಿನ್ ಚಾರ್ಮಾಡಿ, ಅಶೋಕ್ ಮುದ್ದೊಟ್ಟು, ಭವಿತ್ ವಲಸರಿ ಉಪಸ್ಥಿತರಿದ್ದರು.




