ಪುತ್ತೂರು:(ಮೇ.19) ಪುತ್ತೂರು ಬೈಪಾಸ್ ರಸ್ತೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಉರ್ಲಾಂಡಿಯಲ್ಲಿ ರಸ್ತೆ ಪಕ್ಕದಲ್ಲಿ ನಿಂತಿದ್ದ ಶಾಮಿಯಾನದ ಲಾರಿಗೆ ಬೈಕ್ ಡಿಕ್ಕಿಯಾಗಿ ಸವಾರರೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟ ಘಟನೆ ಮೇ .18 ರ ರಾತ್ರಿ ನಡೆದಿದೆ.

ಇದನ್ನೂ ಓದಿ: ☘☘ಉಜಿರೆ: ಉಜಿರೆ ಎಸ್ .ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವಿಸ್ತೃತ ಕಟ್ಟಡಕ್ಕೆ ಭೂಮಿ ಪೂಜೆ
ಬೈಕ್ ಸವಾರ ಕುಂಜೂರುಪಂಜ ಸಮೀಪದ ಸುದೀಪ್ ಚೊಕ್ಕಾಡಿ ಎಂಬವರು ಮೃತಪಟ್ಟವರು. ಅವರು ಮಚ್ಚಿಮಲೆ ಮನೆಯಿಂದ ನೇರಳಕಟ್ಟೆ ತಂಗಿ ಮನೆಗೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.




ಪುತ್ತೂರು ನಗರ ಸಂಚಾರಿ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲಿಸಿ ದೂರು ದಾಖಲಿಸಿದ್ದಾರೆ.
