Sat. Jun 14th, 2025

Khushboo Rajpurohit: ಮದುವೆ ಬಳಿಕ ಮೊದಲ ಬಾರಿ ಪತಿಯ ಭೇಟಿಗೆ ವಿಮಾನ ಹತ್ತಿದ ನವವಧು ಸೇರಿದ್ದು ಮಾತ್ರ ಮಸಣಕ್ಕೆ – ಕೊನೆ ಕ್ಷಣದ ವಿಡಿಯೋ ವೈರಲ್..!

Khushboo Rajpurohit:(ಜೂ.13)ಸಪ್ತಸಾಗರದಾಚೆಯಿದ್ದ ಗಂಡನ ಭೇಟಿಯಾಗಲು ವಿಮಾನ ಹತ್ತಿದ್ದ ನವವಧು ವಿಮಾನ ದುರಂತದಲ್ಲಿ ಕಣ್ಮುಚ್ಚಿದ್ದಾಳೆ. ರಾಜಸ್ಥಾನದ ಬಲೋತಾರಾ ಜಿಲ್ಲೆಯ ಅರಬಾ ಗ್ರಾಮದ ನಿವಾಸಿ ಖುಷ್ಬೂ ರಾಜ್​ಪುರೋಹಿತ್ ಎಂಬಾಕೆ ಇದೇ ವರ್ಷದ ಜನವರಿಯಲ್ಲಿ, ಮನ್ಫೂಲ್ ಸಿಂಗ್ ಅನ್ನೋರನ್ನು ಮದುವೆ ಆಗಿದ್ದರು. ಮದುವೆಯ ನಂತರ ಆಕೆಯ ಪತಿ ಲಂಡನ್​ನಲ್ಲಿ ವ್ಯಾಸಂಗ ಮಾಡುತ್ತಿದ್ದರಂತೆ. ಹೀಗಾಗಿ ಪತಿಯನ್ನು ಮೊದಲ ಬಾರಿ ಭೇಟಿಯಾಗಲು ಖುಷ್ಬು ಲಂಡನ್​ ಫ್ಲೈಟ್​ ಹತ್ತಿದ್ದರು.

ಇದನ್ನೂ ಓದಿ: ⭕Ahmedabad plane crash: ಲಕ್ಕಿ ನಂಬರೇ ಅನ್ ​ಲಕ್ಕಿಯಾಯ್ತು!!

ಅಹ್ಮದಾಬಾದ್​ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ 171 ವಿಮಾನ ಟೇಕ್​ಆಫ್ ಆದ ಕೆಲವೇ ನಿಮಿಷಗಳ ನೆಲಕ್ಕುರುಳಿ ಬೆಂಕಿ ಉಗುಳಿತ್ತು. ಈ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನದಲ್ಲಿ 10 ಗಂಟೆಗಳ ಪ್ರಯಾಣಕ್ಕಾಗಿ 80-90 ಟನ್‌ಗಳಿಗಿಂತ ಹೆಚ್ಚು ಇಂಧನ ತುಂಬಲಾಗಿತ್ತು. ವಿಮಾನ ಪತನಗೊಂಡ ಕೂಡಲೇ ಅಷ್ಟೂ ಇಂಧನಕ್ಕೆ ಬೆಂಕಿ ತಗುಲಿ ದೊಡ್ಡ ಅನಾಹುತ ಸಂಭವಿಸಿದೆ.

https://twitter.com/Surajrawat097/status/1933191930097160539?ref_src=twsrc%5Etfw%7Ctwcamp%5Etweetembed%7Ctwterm%5E1933191930097160539%7Ctwgr%5Ed046714a2759761e45b303ccd82e01d2a9db9ead%7Ctwcon%5Es1_c10&ref_url=https%3A%2F%2Fnewsfirstlive.com%2Fnew-bride-khushboo-rajpurohit-headed-to-london-to-meet-husband-on-board-flight-that-crashed%2F

ಖುಷ್ಬೂ ಅವರಂತೆ.. ಯುಕೆಯಲ್ಲಿ ಅಡುಗೆ ಕೆಲಸಕ್ಕೆ ಹೋಗುತ್ತಿದ್ದವರು, ಬಿಸ್ನೆಸ್​​ ಮಾಡಲು ತೆರಳುತ್ತಿದ್ದವರು, ಉದ್ಯೋಗಕ್ಕಾಗಿ ಹೋಗುತ್ತಿದ್ದವರು ಅನೇಕರಿದ್ದರು. ಕನಸುಗಳ ಬುತ್ತಿ ಕಟ್ಟಿ ಲಂಡನ್ ವಿಮಾನ ಹತ್ತಿದವರು ಶಾಶ್ವತವಾಗಿ ಕಣ್ಮುಚ್ಚಿದ್ದಾರೆ. ವಿಮಾನದಲ್ಲಿ ಒಟ್ಟು 242 ಪ್ರಯಾಣಿಕರು ಇದ್ದರು. ಅವರಲ್ಲಿ ಓರ್ವ ಮಾತ್ರ ಬದುಕುಳಿದಿದ್ದಾರೆ.

Leave a Reply

Your email address will not be published. Required fields are marked *