Sat. Jul 12th, 2025

ಉಜಿರೆ: ಉಜಿರೆ ಎಸ್.ಡಿ.ಎಂ ಪ.ಪೂ.ಕಾಲೇಜಿನಲ್ಲಿ ಅರ್ಥ ಸಂಘ ಉದ್ಘಾಟನೆ 

ಉಜಿರೆ:(ಜು.೧೨) ಉಜಿರೆ ಶ್ರೀ ಧ. ಮಂ. ಪದವಿ ಪೂರ್ವ ಕಾಲೇಜಿನ ಅರ್ಥ ಶಾಸ್ತ್ರ ವಿಭಾಗದ ‘ಅರ್ಥ ಸಂಘ’ವನ್ನು ಎಸ್ ಡಿ ಎಂ ರೆಸಿಡೆನ್ಸಿಯಲ್  ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಟಿ. ಕೃಷ್ಣ ಮೂರ್ತಿ ಯವರು  ಉದ್ಘಾಟಿಸಿದರು. ನಂತರ ಮಾತನಾಡಿದ ಅವರು “ಮಾನವ ಸಂಪನ್ಮೂಲಗಳು ಇಲ್ಲದೆ ನೈಸರ್ಗಿಕ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಿಲ್ಲ.ಇಂದು ಜಗತ್ತಿನ ಅನೇಕ ದೇಶಗಳ ಕಂಪನಿಗಳನ್ನು  ಭಾರತೀಯ ಸಿಇಓಗಳು  ಮುನ್ನಡೆಸುತ್ತಿದ್ದಾರೆ. ಇದು ಭಾರತೀಯ ಪ್ರತಿಭೆಯ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ”ಎಂದು ಹೇಳಿದರು.

ಇದನ್ನೂ ಓದಿ: 🔴ಉಜಿರೆ: ಪರಿಶ್ರಮ ಕೋಚಿಂಗ್‌ ಸೆಂಟರ್‌ ನಲ್ಲಿ ಚೆಸ್‌ ತರಬೇತಿ ತರಗತಿ ಆರಂಭ

 ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಪ್ರಮೋದ್  ಕುಮಾರ್ ರವರು  “ವಿದ್ಯಾರ್ಥಿಗಳು ಇನ್ಸ್ಟಾಗ್ರಾಮ್, ಟ್ವಿಟರ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಸಮಯ ಕಳೆಯುವ ಬದಲು ಅರ್ಥಪೂರ್ಣ ಚಟುವಟಿಕೆಗಳತ್ತ ತಮ್ಮ ಗಮನ ನೀಡಬೇಕು”ಎಂದು ಹೇಳಿದರು.

 ವಿಶ್ವ ಜನಸಂಖ್ಯಾ ದಿನದ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ  ಅತಿಥಿಗಳು ಬಹುಮಾನ ವಿತರಿಸಿದರು. ಅರ್ಥ ಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿಜಯಲಕ್ಷ್ಮಿ, ಉಪನ್ಯಾಸಕಿ ಪದ್ಮಶ್ರೀ ರಕ್ಷಿತ್, ಉಪನ್ಯಾಸಕ ರಾಜು ಎ.ಎಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಹಂಸಿನಿ ಭಿಡೆ ಅತಿಥಿಗಳ ಪರಿಚಯಿಸಿದರು.  ಅನ್ಸುಲಾ ನಿರೂಪಿಸಿ, ಅರ್ಪಿತಾ ಸ್ವಾಗತಿಸಿ ಭಾರ್ಗವ್ ವಂದಿಸಿದರು.

Leave a Reply

Your email address will not be published. Required fields are marked *