Mon. Jul 21st, 2025

Padubidri: ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್‌ – ಓರ್ವ ಮೃತ್ಯು

ಪಡುಬಿದ್ರಿ:(ಜು.21) ಉಡುಪಿ ಜಿಲ್ಲೆಯ ‌ಪಡುಬಿದ್ರಿ ಸಮೀಪ ಆಟೋ ರಿಕ್ಷಾದಲ್ಲಿ ಗೆಳೆಯನನ್ನು ಬೇಂಗ್ರೆಯ ಮನೆಗೆ ಬಿಟ್ಟು ಬರಲು ಪಡುಬಿದ್ರಿ ಜಂಕ್ಷನ್ ಬಳಿ ಆಟೋ ತಿರುಗುತ್ತಿದಂತೆ ಉಡುಪಿ ಕಡೆಯಿಂದ ಮುನ್ನುಗ್ಗಿ ಬಂದ ಖಾಸಗಿ ಬೆಂಗಳೂರು ಬಸ್ ನೇರವಾಗಿ ಡಿಕ್ಕಿಯೊಡೆದ ಪರಿಣಾಮ ಆಟೋ ಚಾಲಕನ ತಲೆಗೆ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಇನ್ನೋರ್ವ ಅವರ ಗೆಳೆಯ ಮುಕ್ಕ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ.

ಇದನ್ನೂ ಓದಿ: ⭕ಬಂಟ್ವಾಳ : ನೇಣುಬಿಗಿದುಕೊಂಡು ಗ್ರಾಮಾಂತರ ಠಾಣಾ ಪಿ.ಎಸ್.ಐ ಆತ್ಮಹತ್ಯೆ

ಮೃತ ಯುವಕ ಪಾದೆಬೆಟ್ಟು ನಿವಾಸಿ ನಂದಿಕೂರಿನ ಬಜಾಜ್ ಸರ್ವಿಸ್ ಸೆಂಟರ್ ನಲ್ಲಿ ಮೆಕ್ಯಾನಿಕ್ ವೃತ್ತಿ ನಡೆಸುತ್ತಿದ್ದ ಮನೋಹರ್ ಟಿ.ಕೋಟ್ಯಾನ್(45) ಹಾಗೂ ಗಾಯಗೊಂಡವರು ಬೇಂಗ್ರೆ ನಿವಾಸಿ ಜಯ ಬೇಂಗ್ರೆ. ಮನೋಹರ್ ವಿವಾಹಿತರಾಗಿದ್ದರೂ ಕೂಡಾ ಯಾವುದೋ ಕಾರಣಕ್ಕೆ ಗಂಡ ಹೆಂಡತಿ ದೂರವಾಗಿದ್ದರು. ಸುಮಾರು 14 ವರ್ಷ ಪ್ರಾಯದ ಮಗನೊಬ್ಬನಿದ್ದು ಆತ ತಂದೆಯೊಂದಿಗೆ ವಾಸವಿದ್ದ ಎಂಬುದಾಗಿ ಇವರ ಗೆಳೆಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *