Wed. Jul 23rd, 2025

Kanyadi: ಕನ್ಯಾಡಿ ಸರ್ಕಾರಿ ಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ರವರ ಉಚಿತ ಯಕ್ಷಧ್ರುವ ಯಕ್ಷ ಶಿಕ್ಷಣ ತರಗತಿ ಉದ್ಘಾಟನೆ

ಕನ್ಯಾಡಿ: (ಜು.23) ಕನ್ಯಾಡಿ ಸರ್ಕಾರಿ ಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ರವರ ಉಚಿತ ಯಕ್ಷಧ್ರುವ ಯಕ್ಷ ಶಿಕ್ಷಣ ತರಗತಿ ಉದ್ಘಾಟನೆ ದಿನಾಂಕ: 22-07-25 ಮಂಗಳವಾರ ದಂದು ಯಕ್ಷದ್ರುವ ಪಟ್ಲ ಫೌಂಡೇಶನ್ ನಡೆಸಿಕೊಡುವ ಯಕ್ಷದ್ರುವ ಯಕ್ಷ ಶಿಕ್ಷಣ ಉಚಿತ ಯಕ್ಷಗಾನ ನಾಟ್ಯ ತರಗತಿಯ ಉದ್ಘಾಟನೆಯು ಗಣ್ಯರು ದೀಪ ಬೆಳಗಿಸುವ ಮೂಲಕ ಶಾಲಾ ಸಭಾಂಗಣದಲ್ಲಿ ನಡೆಯಿತು.

ಇದನ್ನೂ ಓದಿ: ⭕ಉಡುಪಿ: ಅಂತರ್‌ ರಾಜ್ಯ ಮನೆ ಕಳ್ಳರ ಬಂಧನ

ಕಾರ್ಯಕ್ರಮದಲ್ಲಿ ಪಟ್ಲ ಫೌಂಡೇಶನ್ ಕೇಂದ್ರೀಯ ಘಟಕದ ಸಲಹೆಗಾರರಾದ ಭುಜಬಲಿ ಡಿ ಇವರು ಶುಭ ಹಾರೈಸಿದರು, ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಯವರು ಪಟ್ಲ ಫೌಂಡೇಶನ್ ಕಾರ್ಯ ಚಟುವಟಿಕೆ ಕುರಿತು ವಿವರಿಸಿದರು ಬೆಳ್ತಂಗಡಿ ತಾಲೂಕು ಘಟಕದ ಸಂಚಾಲಕರಾದ ಕಿರಣ್ ಕುಮಾರ್ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿದರು.

ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ.ನಂದ , ಗೌರವ ಸಲಹೆಗಾರರಾದ ರಾಜೇಂದ್ರ ಅಜ್ರಿ, ಶಾಲಾ ಮುಖ್ಯೋಪಾಧ್ಯಾಯನಿ ಪುಷ್ಪಾ .ಎನ್ ಹಾಗೂ ಮುಖ್ಯ ಅತಿಥಿಯಾಗಿ ಕನ್ಯಾಡಿಯ ಯುವ ಉದ್ಯಮಿ ಪದ್ಮಪ್ರಸಾದ್ ಜೈನ್ , ಹಿರಿಯ ವಿದ್ಯಾರ್ಥಿ ಸುದರ್ಶನ್ ಕನ್ಯಾಡಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಶಾಲಾ ಅಧ್ಯಾಪಕ ವೃಂದ, ಮಕ್ಕಳು ಉಪಸ್ಥಿತರಿದ್ದರು ಯಕ್ಷ ಗುರುಗಳಾದ ಅರುಣ್ ಕುಮಾರ್ ನಾಟ್ಯ ತರಬೇತಿಯನ್ನು ಪ್ರಾರಂಭಿಸಿದರು.


ಶಾಲೆಯ ಹಿರಿಯ ವಿದ್ಯಾರ್ಥಿ ಯಕ್ಷಗಾನ ಕ್ಷೇತ್ರದಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ ಹಿರಿಯ ಕಲಾವಿದ ಸಂತೋಷ್ ಕುಮಾರ್ ಡಿ ಯವರಿಗೆ ಗೌರವಾರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿ ಪಾರಂಪರಿಕ ಶೈಲಿಯ ಖ್ಯಾತ ಭಾಗವತರಲ್ಲಿ ಒಬ್ಬರಾದ ಮಹೇಶ್ ಕನ್ಯಾಡಿ ಉಪಸ್ಥಿತರಿದ್ದರು.


ಪಟ್ಲ ಫೌಂಡೇಶನ್ ಯಕ್ಷ ಶಿಕ್ಷಣಕ್ಕೆ ಕನ್ಯಾಡಿ ಶಾಲೆಯನ್ನು ಆಯ್ಕೆ ಮಾಡಿದ್ದಕ್ಕಾಗಿ ಶಾಲಾ ಅಧ್ಯಕ್ಷರು ಹಾಗೂ ಮುಖ್ಯೋಪಾಧ್ಯಾಯರು ತುಂಬು ಹೃದಯದಿಂದ ಧನ್ಯವಾದಗಳನ್ನು ಅರ್ಪಿಸಿದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾ ಎನ್ ಸ್ವಾಗತಿಸಿ, ಶ್ರೀಮತಿ ಜಯಶ್ರೀ ಧನ್ಯವಾದವನ್ನು ಮತ್ತು ಶ್ರೀಮತಿ ಶ್ವೇತಕುಮಾರಿ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *