ಗೇರುಕಟ್ಟೆ:(ಜು.26)ಕರ್ನಾಟಕ ಯೋಗ ಶಿಕ್ಷಣ ಸಮಿತಿ. (ರಿ) ಕರ್ನಾಟಕ ಮಂಗಳೂರು ವಲಯ ಇದರ ಕಳಿಯ ಶಾಖೆಯ ವತಿಯಿಂದ ಕಾರ್ಗಿಲ್ ವಿಜಯ ದಿವಸವನ್ನು ಗೇರುಕಟ್ಟೆಯ ಕ್ಷೀರಸಂಗಮ ಸಭಾಭವನ ಶಾಖೆ ಆಚರಿಸಲಾಯಿತು.

ಇದನ್ನೂ ಓದಿ: ⭕ಬೆಳ್ತಂಗಡಿ : ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯ ಕೊಲೆ ಯತ್ನ ಪ್ರಕರಣ
ಮುಖ್ಯ ಶಿಕ್ಷಕಿ ಪ್ರೇಮಲತಾ ಗಣೇಶ್ ಮಾತನಾಡಿ ದೇಶದ ಮತ್ತು ಧರ್ಮದ ರಕ್ಷಣೆಗೆ ಭಾರತೀಯರೆಲ್ಲರೂ ದೃಢಸಂಕಲ್ಪ ಮಾಡಬೇಕೆಂದು ತಿಳಿಸಿ ದೇಶದ ರಕ್ಷಣೆಯಲ್ಲಿ ಅಹರ್ನಿಶಿ ಕಾರ್ಯನಿರ್ವಹಿಸುವ ಯೋಧರ ದೈಹಿಕ ಮತ್ತು ಮಾನಸಿಕ ಸ್ಥಿರತೆಗೆ ಸಾಮೂಹಿಕ ಪ್ರಾರ್ಥನೆಯು ಬಲವನ್ನು ನೀಡುವುದೆಂದರು.

ಕಾರ್ಗಿಲ್ ವಿಜಯ ದಿವಸದ ಹಿನ್ನೆಲೆಯ ಬಗ್ಗೆ ಮಾತನಾಡಿದ ಸತೀಶ್ ನಾಳ ಭಾರತ-ಪಾಕ್ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ನೆಲೆಯೂರಿದ ಪಾಕ್ ಸೈನಿಕರನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಯೋಧರು ತೋರಿದ ಪರಾಕ್ರಮವನ್ನು ತಿಳಿಸಿ ಹುತಾತ್ಮರಾದ ಸೈನಿಕರನ್ನು ಸ್ಮರಿಸುವುದು ನಮ್ಮ ಕರ್ತವ್ಯವೆಂದು ತಿಳಿಸಿದರು.

ಕೇಂದ್ರದ ಸಹ ಶಿಕ್ಷಕ ಸುಕೇಶ, ಸಂಚಾಲಕರಾದ ವಿಜಯ, ವರದಿ ಪ್ರಮುಖ ಕೇಶವ,ಅಶೋಕ,ವಸಂತ,ದಿವಾಕರ,ಮಧುಕರ,ರತ್ನಾಕರ,ಗಣೇಶ್,ಅವಿನಾಶ ಮತ್ತು ಅರುಣ,ಭಾರತಿ,ಶುಭಮಂಗಳ,ಪದ್ಮಲತಾ,ಧರಿತ್ರಿ ಉಪಸ್ಥಿತರಿದ್ದರು. ಯೋಗ ಬಂಧು ಶಿವಣ್ಣ ವಂದಿಸಿದರು.
