Tue. Oct 14th, 2025

Ujire: ವಿಶ್ವ ರಜೋನಿವೃತ್ತಿ (ಮೆನೋಪಾಸ್) ದಿನಾಚರಣೆಯ ಅಂಗವಾಗಿ ಬೆನಕ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಶಿಬಿರ

ಉಜಿರೆ (ಅಕ್ಟೋಬರ್ 11 ): ವಿಶ್ವ ರಜೋನಿವೃತ್ತಿ ದಿನಾಚರಣೆಯ (ಮೆನೋಪಾಸ್ ದಿನ) ಅಂಗವಾಗಿ ಬೆನಕ ಆಸ್ಪತ್ರೆಯಲ್ಲಿ 45 ವರ್ಷ ಮೇಲ್ಪಟ್ಟ ಮಹಿಳೆಯರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.

ಇದನ್ನೂ ಓದಿ: 🔴ಉಜಿರೆ: ದಿಶಾ ಬೇಕರಿಯ ಹೊಸ ಶಾಖೆ ಅಕ್ಟೋಬರ್.‌16 ರಂದು ಆರಂಭ

ಡಾ. ಭಾರತಿ ಗೋಪಾಲಕೃಷ್ಣ ಅವರು ದೀಪ ಬೆಳಗಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿ,ರಜೋನಿವೃತ್ತಿ (Menopause) ಎಂಬುದು ಚರ್ಚೆಯ ವಿಷಯವಲ್ಲ, ಗಂಭೀರ ಆರೋಗ್ಯ ಸಮಸ್ಯೆಯಲ್ಲ. ಇದು ಮಹಿಳೆಯರಲ್ಲಿ 45 ವರ್ಷ ವಯಸ್ಸಿನ ನಂತರ ಸಹಜವಾಗಿ ನಡೆಯುವ ಪ್ರಕ್ರಿಯೆ. ಮಹಿಳೆಯರು ರಜೋನಿವೃತ್ತಿಯ ನಂತರವೂ ನೋವಿಲ್ಲದೆ, ಚೈತನ್ಯಭರಿತವಾಗಿ ಬದುಕಬಹುದು — ಆದರೆ ಅದಕ್ಕಾಗಿ ಸರಿಯಾದ ಸಮಯದಲ್ಲಿ ತಕ್ಕ ಚಿಕಿತ್ಸೆಯನ್ನು ಪಡೆಯುವುದು ಅತ್ಯಂತ ಮುಖ್ಯ,” ಎಂದು ಹೇಳಿದರು.

ಡಾ. ಅಂಕಿತಾ (ಸ್ತ್ರೀರೋಗ ತಜ್ಞೆ ಹಾಗೂ ಲ್ಯಾಪರೋಸ್ಕೋಪಿಕ್ ಶಸ್ತ್ರ ಚಿಕಿತ್ಸಾ ತಜ್ಞರು) ಅವರು ಮಾತನಾಡಿ, “ಮಹಿಳೆಯರು 40 ರಿಂದ 45 ವರ್ಷ ವಯಸ್ಸಿನ ನಂತರ ರಜೋನಿವೃತ್ತಿಯನ್ನು ಅನುಭವಿಸುತ್ತಾರೆ. ಇದು ಸಹಜವಾದ ಶಾರೀರಿಕ ಪ್ರಕ್ರಿಯೆಯಾಗಿದ್ದು, ಇದನ್ನು ಸಮಸ್ಯೆಯೆಂದು ಭಾವಿಸಬಾರದು. ಈ ಅವಧಿಯಲ್ಲಿ ಅನೇಕ ಬದಲಾವಣೆಗಳು ಕಾಣಿಸಬಹುದು. ಸಮಯಕ್ಕೆ ಸರಿಯಾದ ತಪಾಸಣೆ ಮಾಡಿಸಿಕೊಂಡರೆ ಪರಿಹಾರ ದೊರೆಯುತ್ತದೆ. ರಜೋನಿವೃತ್ತಿ ಸಮಸ್ಯೆಯಲ್ಲ — ಪ್ರತಿ ಮಹಿಳೆಯೂ ಎದುರಿಸುವ ಒಂದು ಹಂತ. ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಿ, ನಾವು ಚಿಕಿತ್ಸೆಯನ್ನು ನೀಡುತ್ತೇವೆ,” ಎಂದು ಹೇಳಿದರು.

ಡಾ. ನವ್ಯಾ ಭಟ್ (ಸ್ತ್ರೀರೋಗ ತಜ್ಞೆ ಹಾಗೂ ಐವಿಎಫ್ ತಜ್ಞೆ) ಅವರು ಮಾತನಾಡಿ, “ಪ್ರತಿ ಮಹಿಳೆಯ ಸಮಸ್ಯೆಗೆ ಪರಿಹಾರ ಮತ್ತು ಚಿಕಿತ್ಸೆ ಇದೆ. ಮಹಿಳೆಯರು ತಮ್ಮ ಸಮಸ್ಯೆಗಳನ್ನು ತೆರೆದ ಮನಸ್ಸಿನಿಂದ ಹಂಚಿಕೊಂಡರೆ ಮಾತ್ರ ನಾವು ಸರಿಯಾದ ಚಿಕಿತ್ಸೆ ನೀಡಲು ಸಾಧ್ಯ. ಇಂದಿನ ಉಚಿತ ಶಿಬಿರದ ಮೂಲಕ ನಾವು ಮಹಿಳೆಯರಿಗೆ ಪರಿಹಾರ ನೀಡುತ್ತಿದ್ದೇವೆ,” ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಬೆನಕ ಆಸ್ಪತ್ರೆಯ ಪಿಆರ್‌ಒ ಶ್ರೀ ಎಸ್. ಜಿ. ಭಟ್ ಅವರು ಸ್ವಾಗತಿಸಿ ವಂದಿಸಿದರು. ಬೆನಕ ಆಸ್ಪತ್ರೆಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ದೇವಸ್ಯ ವರ್ಗೀಸ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *