ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-ಬೆಳ್ತಂಗಡಿ ಲಾಯಿಲ ಗ್ರಾಮೀಣ ಶ್ರೇಷ್ಠತಾ ತರಬೇತಿ ಕೇಂದ್ರದಲ್ಲಿ ಕೌಶಲ್ಯಾಭಿವೃದ್ಧಿ ಯೋಜನೆಯಡಿ ಮೆಹಂದಿ ಡಿಸೈನ್‌ತರಬೇತಿಯ ಸಮಾರೋಪ ಕಾರ್ಯಕ್ರಮದಲ್ಲಿ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ರಮೇಶ್ ಇವರು ಮಾತನಾಡಿ ಮೆಹಂದಿ ಡಿಸೈನ್‌ನ್ನು ನಿರಂತರವಾಗಿ ಕಲಿಯಿವುದರಿಂದ ಹೆಚ್ಚು ಕೌಶಲ್ಯದ ಹೆಚ್ಚು ಆದಾಯ ಗಳಿಕೆ ಮಾಡಬಹುದು.

ಇದನ್ನೂ ಓದಿ: 🔴ಬೆಳ್ತಂಗಡಿ : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯಲ್ಲಿ IGNITE 2K25
ಸಂಸ್ಥೆಯು ಉಚಿತವಾಗಿ ನೀಡುವ ಉದ್ದೇಶವೇನಂದರೆ ಮಹಿಳೆಯರು ಇತರರಿಗೆ ಅವಲಂಬಿಸದೆ ಸ್ವಂತ ಉದ್ದಿಮೆ ಮಾಡಬೇಕು ಎನ್ನುವುದಾಗಿದೆ. ಇದರಿಂದ ಮಹಿಳೆ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬಹುದು. ಸಮಾಜದಲ್ಲಿ ಗೌರವ ಹಾಗೂ ಸ್ವಾವಲಂಬಿ ಬದುಕನ್ನು ಕಾಣಬಹುದು. ಈ ತರಬೇತಿಯು ಯಾವುದೇ ಬಂಡವಾಳ ಇಲ್ಲದೆ ಸಂಪಾದನೆ ಮಾಡುವ ಸ್ವಉದ್ಯೋಗವಾಗಿದೆ ಎಂದರು. ಇವರು ತರಬೇತಿ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಶುಭಹಾರೈಸಿದರು.

ಒಟ್ಟು 27 ಮಂದಿ ಯೋಜನೆಯ ಪಾಲುದಾರ ಬಂಧುಗಳು ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದುಕೊಂಡಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಕು. ಹರ್ಷಿತಾ ಇವರು ತರಗತಿ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ತರಬೇತಿ ಸಂಯೋಜಕರಾದ ಜಯಶ್ರೀ ಕಾರ್ಯಕ್ರಮ ನಿರ್ವಹಣೆ ಮಾಡಿ ಧನ್ಯವಾದ ನೀಡಿದರು.




