Fri. Oct 31st, 2025

Ujire: ರಾಜ ಕೇಸರಿ ಸೇವಾ ಟ್ರಸ್ಟ್ (ರಿ.) ಬೆಳ್ತಂಗಡಿ ಇದರ ವತಿಯಿಂದ ಉಜಿರೆಯ ವಿಶೇಷ ಚೇತನದ ಬಿರ್ಕು ಗಾಂಧಿನಗರ ಇವರಿಗೆ ಮೊಬೈಲ್ ಹಸ್ತಾಂತರ

ಉಜಿರೆ:(ಅ.31) ಉಜಿರೆ ಗ್ರಾಮ ಪಂಚಾಯತ್ ನ 2025 -2026 ನೇ ಸಾಲಿನ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆಯಲ್ಲಿ ರಾಜ ಕೇಸರಿ ಸೇವಾ ಟ್ರಸ್ಟ್ (ರಿ.) ಬೆಳ್ತಂಗಡಿ ಇದರ ವತಿಯಿಂದ

ಇದನ್ನೂ ಓದಿ: ⭕ಬೆಳ್ತಂಗಡಿ : ಮೊಗ್ರು ಗ್ರಾಮದ ಮುಗೇರಡ್ಕ ನೇತ್ರಾವತಿ ನದಿಯಲ್ಲಿ ಮೊಸಳೆ ಪತ್ತೆ

ರಾಜ ಕೇಸರಿ ಸೇವಾ ಟ್ರಸ್ಟ್ (ರಿ.) ಕರ್ನಾಟಕ ಇದರ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ 581 ನೇ ಯ ಸೇವಾ ಯೋಜನೆ ಉಜಿರೆಯ ವಿಶೇಷ ಚೇತನದ ಬಿರ್ಕು ಗಾಂಧಿನಗರ ಇವರಿಗೆ ಮೊಬೈಲ್ ಹಸ್ತಾಂತರ ಮೊಡಲಾಯಿತು.

ಈ ಸಂದರ್ಭದಲ್ಲಿ ಜಗದೀಶ್ ಲಾಯಿಲ ಸಂಚಾಲಕರು ರಾಜ ಕೇಸರಿ ಸೇವಾ ಟ್ರಸ್ಟ್ ರಿ ಬೆಳ್ತಂಗಡಿ ತಾಲೂಕು ದೇವರಾಜ್ ಪೂಜಾರಿ ಸಾಂಸ್ಕೃತಿಕ ಕಾರ್ಯದರ್ಶಿ ರಾಜ ಕೇಸರಿ ಸೇವಾ ಟ್ರಸ್ಟ್ ರಿ ಬೆಳ್ತಂಗಡಿ ತಾಲೂಕು,

ಗ್ರಾಮ ಪಂಚಾಯತ್ ಉಜಿರೆ ಅಧ್ಯಕ್ಷರು ಉಷಾ ಕಿರಣ್ ಕಾರಂತ್, ಗ್ರಾಮ ಪಂಚಾಯತ್ ಉಜಿರೆ ಅಭಿವೃದ್ಧಿ ಅಧಿಕಾರ ಪಿ ಹೆಚ್ ಪ್ರಕಾಶ್ ಶೆಟ್ಟಿ, ಶ್ರೀಮತಿ ಸೀತಾ ಆರ್ ಶೇಟ್, ವಿಪುಲ್ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಗ್ರಾಮ ಪಂಚಾಯತ್ ಉಜಿರೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *