ಬೆಳ್ತಂಗಡಿ: ಭಾರತೀಯ ದಂತ ವೈದ್ಯರ ಸಂಘ ಕರ್ನಾಟಕ ರಾಜ್ಯ ಇದರ ನಿಯೋಜಿತ ಅಧ್ಯಕ್ಷರಾಗಿ ಪುತ್ತೂರು ದಂತ ವೈದ್ಯರ ಸಂಘದ ಡಾ. ರಾಘವೇಂದ್ರ ಪಿದಮಲೆ ಇವರು ಕಾರವಾರದಲ್ಲಿ ನಡೆದ 51 ನೇ ಯ ಭಾರತೀಯ ದಂತ ವೈದ್ಯ ಕರ್ನಾಟಕ ರಾಜ್ಯ ಕಾನ್ಫರೆನ್ಸ್ ನಲ್ಲಿ ಆಯ್ಕೆ ಆಗಿದ್ದಾರೆ.

ಇದನ್ನೂ ಓದಿ: ⭕Bigg Boss: ಸುದೀಪ್ ಎದುರೇ ರಿಷಾ ಎಲಿಮಿನೇಷನ್..?
ಇವರು ಮೂಲತಃ ವಿಟ್ಲ ಸಮೀಪದ ಪಿದಮಲೆಯವರಾಗಿದ್ದು, ಎಸ್.ಡಿ.ಎಂ ಧಾರವಾಡದಿಂದ ಬಿ.ಡಿ.ಎಸ್ ಪದವಿ, ಎ.ಜೆ. ಡೆಂಟಲ್ ಕಾಲೇಜಿನಿಂದ ಎಂ.ಡಿ.ಎಸ್ ಪದವಿಯನ್ನು ಪಡೆದಿದ್ದಾರೆ.
ಪ್ರಸ್ತುತ ಕೆ.ವಿ.ಜಿ ಡೆಂಟಲ್ ಕಾಲೇಜಿನಲ್ಲಿ ಮಕ್ಕಳ ದಂತ ಚಿಕಿತ್ಸಾ ವಿಭಾಗದ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬೆಳ್ತಂಗಡಿಯಲ್ಲಿ ಶ್ರೀ ದುರ್ಗಾ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ & ಇನ್ಪ್ಲ್ಯಾಂಟ್ ಸೆಂಟರ್ ಅನ್ನು ಕಳೆದ 25 ವರ್ಷಗಳಿಂದ ಪತ್ನಿ ಡಾ. ಆಶಾ ಪಿದಮಲೆ ಇವರೊಂದಿಗೆ ನಡೆಸುತ್ತಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ರಾಷ್ಟ್ರೀಯ ದಂತ ವೈದ್ಯರ ಸಂಘದ ಸೆಂಟ್ರಲ್ ಕೌನ್ಸಿಲ್ ಮೆಂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಅದಲ್ಲದೆ ಪುತ್ತೂರು ಭಾರತೀಯ ದಂತ ವೈದ್ಯರ ಸಂಘದ ಅಧ್ಯಕ್ಷರು ಕೂಡ ಆಗಿದ್ದರು.
ಭಾರತೀಯ ದಂತ ವೈದ್ಯರ ಸಂಘ ಕರ್ನಾಟಕ ರಾಜ್ಯ ಇದರ ನಿಯೋಜಿತ ಅಧ್ಯಕ್ಷರಾಗಿ ಆಯ್ಕೆಗೊಂಡ ಡಾ.ರಾಘವೇಂದ್ರ ಪಿದಮಲೆ ಇವರಿಗೆ ಭಾರತೀಯ ದಂತ ವೈದ್ಯಕೀಯ ಸಂಘ, ಪುತ್ತೂರು ಶಾಖೆಯ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.





