Rashika: ಸೂರಜ್ ಹಾಗೂ ರಾಶಿಕಾ ಮಧ್ಯೆ ಏನೋ ಇದೆ ಎಂದು ಎಲ್ಲರೂ ಭಾವಿಸಿದ್ದರು. ಇದಕ್ಕೆ ಅವರ ನಡೆಯೇ ಕಾರಣ. ಸೂರಜ್ ಕೈ ಹಿಡಿದುಕೊಂಡು ‘ಪ್ರೀತಿ ಹೇಗೆ ಹುಟ್ಟುತ್ತೆ ಅಂತ ಹೇಳೋಕಾಗಲ್ಲ’ ಎಂದು ಹೇಳಿದ್ದ ರಾಶಿಕಾ, ಈಗ ಸುದೀಪ್ ಹೇಳಿದ ಪಾಠದ ಬಳಿಕ ಬದಲಾಗಿದ್ದಾರೆ. ರಾಶಿಕಾ ಅವರು ದೊಡ್ಮನೆಯಲ್ಲಿ ತಮ್ಮ ಆಟವನ್ನು ಪ್ರದರ್ಶನ ಮಾಡಲು ರೆಡಿ ಆಗಿದ್ದಾರೆ. ಅದಕ್ಕೂ ಮೊದಲು ಸೂರಜ್ ಜೊತೆ ಅಂತರ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ: 🔴ಉಜಿರೆ:(ನ.16) ಎಸ್.ಡಿ.ಎಂ ಮಲ್ಟಿ – ಸ್ಪೆಷಾಲಿಟಿ ಆಸ್ಪತ್ರೆ ಉಜಿರೆಯಲ್ಲಿ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ
ಸೂರಜ್ ಅವರು ದೊಡ್ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟರು. ಅವರು ಬಂದ ದಿನವೇ ರಾಶಿಕಾಗೆ ರೋಸ್ ಕೊಟ್ಟರು. ಅಲ್ಲಿಂದ ಇಬ್ಬರ ಮಧ್ಯೆ ಫ್ರೆಂಡ್ಶಿಪ್ ಬೆಳೆಯಿತು. ಆ ಬಳಿಕ ಇಬ್ಬರೂ ಕೈ ಕೈ ಹಿಡಿದು ಸುತ್ತಾಡಲು ಆರಂಭಿಸಿದರು. ಇವರ ಜೋಡಿ ನೋಡಿ ಅನೇಕರಿಗೆ ಅಸಮಾಧಾನ ಮೂಡಿತ್ತು. ‘ಕಾಲೇಜು ಹೋಗೋರ ಲವ್ಸ್ಟೋರಿ ರೀತಿ ಇದೆ’ ಎಂದು ಅನೇಕರು ಆರೋಪ ಮಾಡಿದ್ದರು. ಸುದೀಪ್ ಕೂಡ ವೇದಿಕೆ ಮೇಲೆ ಈ ವಿಚಾರವನ್ನು ಸೂಕ್ಷ್ಮವಾಗಿ ಹೇಳಿದ್ದರು. ಈ ವಿಚಾರವನ್ನು ರಾಶಿಕಾ ಗಂಭೀರವಾಗಿ ಸ್ವೀಕರಿಸಿದಂತೆ ಇದೆ.

‘ನಾವು ಜಸ್ಟ್ ಫ್ರೆಂಡ್ಸ್. ಇದಕ್ಕಿಂತ ಮೇಲೆ ಏನೂ ಇಲ್ಲ’ ಎಂದು ಸೂರಜ್ ಬಳಿ ಬಂದು ರಾಶಿಕಾ ಸ್ಪಷ್ಟನೆ ನೀಡಿದ್ದಾರೆ. ಇದಕ್ಕೆ ಸೂರಜ್ ಕೂಡ ತಲೆ ಆಡಿಸಿದ್ದಾರೆ. ‘ಕೈ ಕೈ ಹಿಡ್ಕೊಳೋದು ಬೇಡ. ನಮ್ಮಿಬ್ಬರ ಮಧ್ಯೆ ಬೇರೆ ಸ್ಟೋರಿ ಇದೆ ಎಂದ್ರೆ ನಾನು ಒಪ್ಪಿಕೊಳ್ಳಲ್ಲ. ಫ್ರೆಂಡ್ಶಿಪ್ನಲ್ಲೂ ಹುಡುಗ-ಹುಡುಗಿ ಕ್ಲೋಸ್ ಆಗಿರ್ತಾರೆ. ಅದು ತಪ್ಪಲ್ಲ’ ಎಂದು ರಾಶಿಕಾ ಮಾತನಾಡಿದರು.


‘ನಮ್ಮಿಬ್ಬರ ಮಧ್ಯೆ ಇರೋದು ಗೆಳೆತನ ಮಾತ್ರ. ಇನ್ನುಮುಂದೆ ಜಾಸ್ತಿ ಮಾತನಾಡೋದು ಬೇಡ. ನಿನ್ನ ಪಾಡಿಗೆ ನೀನಿರು, ನನ್ನ ಪಾಡಿಗೆ ನಾನಿರ್ತೀನಿ’ ಎಂದು ರಾಶಿಕಾ ಮುಖಕ್ಕೆ ಹೊಡೆದಂತೆ ಹೇಳಿದರು. ಈ ವಿಚಾರ ಸೂರಜ್ಗೆ ಬೇಸರ ಮೂಡಿಸಿತು. ‘ನಾಳೆಯಿಂದ ಹೊಸ ದಿನ’ ಎಂದು ಹೇಳಿ ಸೂರಜ್ ಅಲ್ಲಿಂದ ನಡೆದುಬಿಟ್ಟರು.


