ಉಜಿರೆ:(ನ.7) ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಉಜಿರೆ ಇಲ್ಲಿ ಭಕ್ತ ಕವಿ, ತತ್ತ್ವಜ್ಞಾನಿ ಹಾಗೂ ದಾಸ ಪರಂಪರೆಯ ಮಹಾನ್ ವ್ಯಕ್ತಿತ್ವರಾದ ಶ್ರೀ ಕನಕದಾಸರ ಜಯಂತಿ ಭಾವಪೂರ್ಣವಾಗಿ ಆಚರಿಸಲಾಯಿತು.

ಇದನ್ನೂ ಓದಿ: ⭕ಕೊಪ್ಪಳ: ಅಣ್ಣ-ತಂಗಿ ಸಂಬಂಧಕ್ಕೆ ಕಳಂಕ
“ಕನಕ ಸ್ಮೃತಿ” ಶೀರ್ಷಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನಕದಾಸ ಜಯಂತಿಯ ಮಹತ್ವ ಹಾಗೂ ಹಿನ್ನೆಲೆಯ ಕುರಿತು 10ನೇ ತರಗತಿ ವಿದ್ಯಾರ್ಥಿ ಚಿಂತನ್ ಪಾತ್ರಾಭಿನಯ, 6ನೇ ತರಗತಿ ವಿದ್ಯಾರ್ಥಿಗಳಿಂದ ಕನಕದಾಸರ ಕೀರ್ತನೆ ಗಾಯನ, 9ನೇ ತರಗತಿ ವಿದ್ಯಾರ್ಥಿಗಳಾದ ಶ್ರೇಯ ಹಾಗೂ ಸಹನಾ ಕನಕದಾಸರ ಕೀರ್ತನೆಗೆ ನೃತ್ಯ ಪ್ರದರ್ಶನ ಮಾಡಿ 10ನೇ ತರಗತಿ ವಿದ್ಯಾರ್ಥಿನಿ ಸ್ವಸ್ತಿಶ್ರೀ ರಸಪ್ರಶ್ನೆ ಕೇಳಿದರು.
ಶಾಲಾ ಪ್ರಾಂಶುಪಾಲರಾದ ಮನ್ಮೋಹನ್ ನಾಯ್ಕ್ ಕೆ. ಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ದೀಪ ಪ್ರಜ್ವಲಿಸಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಸಿದರು.
ವಿದ್ಯಾರ್ಥಿಗಳಾದ ಸ್ವಸ್ತಿಶ್ರೀ ಹಾಗೂ ಅಲ್ರಿಕ್ ಕಾರ್ಯಕ್ರಮ ನಿರೂಪಿಸಿದರು.





