ಬೆಳ್ತಂಗಡಿ: ವಿವಾಹಿತ ಮಹಿಳೆಯೊಬ್ಬಳು ನಾಪತ್ತೆಯಾದ ಘಟನೆ ನಡೆದಿದೆ.

ಇದನ್ನೂ ಓದಿ: 🔵ವಿಟ್ಲ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಭಜನೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ಕಡಬ ತಾಲೂಕಿನ ಬಂಟ್ರ ಗ್ರಾಮದ ನಿವಾಸಿ ಸುಪ್ರೀತ್ ಕುಮಾರ್ ಜಿ ಅವರ ಪತ್ನಿ ಕವಿತಾ (27) ಕಾಣೆಯಾದ ಪ್ರಕರಣ ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕವಿತಾ ಅವರು ಇತ್ತೀಚೆಗೆ ತಮ್ಮ ತಾಯಿ ಮನೆಯಾದ ಬೆಳ್ತಂಗಡಿ ತಾಲೂಕು ನ್ಯಾಯತರ್ಪು ಗ್ರಾಮದ ಗೋವಿಂದೂರು ಮನೆಗೆ ಹೋಗಿ ಶುಕ್ರವಾರ ಮರಳುವುದಾಗಿ ಪತಿಗೆ ತಿಳಿಸಿದ್ದರು. ಆದರೆ ದಿನಾಂಕ 03-12-2025ರಂದು ಬೆಳಿಗ್ಗೆ 7.15ಕ್ಕೆ ಪತಿ ಕೆಲಸಕ್ಕೆ ತೆರಳಿದ ಬಳಿಕ ಮನೆಯಲ್ಲಿ ಯಾರಿಗೂ ತಿಳಿಯದಂತೆ ಹೊರಗೆ ಹೋಗಿದ್ದು ಸಂಜೆವರೆಗೂ ಮರಳಿ ಬರಲಿಲ್ಲ.
ಪತ್ನಿ ತಾಯಿ ಮನೆಗೆ ಹೋಗಿರಬಹುದು ಎಂಬ ಭಾವನೆಯಿಂದ ಪತಿ ಸಂಬಂಧಿಕರಿಗೆ ವಿಚಾರಿಸಿದರೂ, ಅಲ್ಲಿ ಕವಿತಾ ಹೋಗಿಲ್ಲವೆಂದು ತಿಳಿದುಬಂದಿದೆ. ನಂತರ ನೆರೆಹೊರೆಯವರು ಹಾಗೂ ಬಂಧುಮಿತ್ರರಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗದೆ ಇರುವುದರಿಂದ ಸುಪ್ರೀತ್ ಕುಮಾರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.


ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ. 85/2025ರಂದು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.



