ಉಜಿರೆ :(ಜು.22) ಭಾರತದಲ್ಲಿ ಅನಾದಿಕಾಲದಿಂದಲೂ ಗುರುಶಿಷ್ಯ ಪರಂಪರೆ ನಡೆದು ಬಂದಿದೆ; ಈ ಪರಂಪರೆಯಿಂದಲೇ ನಮ್ಮ ರಾಷ್ಟ್ರವು ಇಂದಿಗೂ ವೈಭವಸಂಪನ್ನವಾಗಿದೆ. ಈ ಪರಂಪರೆಯು ಸಮಾಜಕ್ಕೆ ಅಧ್ಯಾತ್ಮದ ಜ್ಞಾನವನ್ನು ನೀಡುವುದರೊಂದಿಗೆ ಸುಸಂಸ್ಕೃತ ಆಚರಣೆಗಳನ್ನೂ ಕಲಿಸಿದೆ. ನಮ್ಮ ಆಚಾರ, ವಿಚಾರ, ಉಡುಪು, ವರ್ತನೆ ಇವೆಲ್ಲವೂ ಸುಸಂಸ್ಕೃತವಾಗಿರಲು ನಾವು ಪ್ರಯತ್ನಿಸಬೇಕಿದೆ.
ಇದನ್ನೂ ಓದಿ:https://uplustv.com/2024/07/22/mangaluru-ಅಡಿಕೆ-ಕೃಷಿಕರಿಗೆ-ಈ-ಬಾರಿ-ಮತ್ತೆ
ಪ್ರಭು ಶ್ರೀರಾಮಚಂದ್ರ ಕೂಡ ತಮ್ಮ ಗುರುಗಳ ಆಶೀರ್ವಾದ ಪಡೆದು ಆದರ್ಶ ರಾಮರಾಜ್ಯದ ಸ್ಥಾಪನೆಯನ್ನು ಮಾಡಿದ್ದರು. ಈಗ ನಾವೂ ಇಂತಹ ಆದರ್ಶ ರಾಜ್ಯದ ಸ್ಥಾಪನೆಗಾಗಿ ಸುಸಂಸ್ಕೃತ ಆಚರಣೆಗಳೊಂದಿಗೆ ಪ್ರತಿದಿನ ಪ್ರಭು ಶ್ರೀರಾಮನಿಗೆ ಪ್ರಾರ್ಥನೆಯನ್ನು ಮಾಡೋಣ ಎಂದು ಸನಾತನ ಸಂಸ್ಥೆಯ ಸೌ. ಮಂಜುಳಾ ಈ ಸಮಯದಲ್ಲಿ ಕರೆ ನೀಡಿದರು.
ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಶ್ರೀ ಕೃಷ್ಣಾನುಗ್ರಹ ಸಭಾ ಭವನದಲ್ಲಿ ಗುರುಪೂರ್ಣಿಮಾ ಮಹೋತ್ಸವ ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು. ಇದರೊಂದಿಗೆ ಜಿಲ್ಲೆಯ ಮಂಗಳೂರು, ಬಂಟ್ವಾಳದಲ್ಲಿ ಮತ್ತು ದೇಶದಾದ್ಯಂತ 71 ಸ್ಥಳಗಳಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಗುರುಪೂರ್ಣಿಮಾ ಮಹೋತ್ಸವವನ್ನು ಆಯೋಜಿಸಿತ್ತು. 300 ಕ್ಕೂ ಅಧಿಕ ಜನರು ಈ ಕಾರ್ಯಕ್ರಮದ ಲಾಭ ಪಡೆದರು. ಈ ದಿನ ಬೆಳಿಗ್ಗೆ ಶ್ರೀ ವ್ಯಾಸ ಪೂಜೆ ಮತ್ತು ಪರಮಪೂಜ್ಯ ಭಕ್ತರಾಜ ಮಹಾರಾಜರ ಪ್ರತಿಮಾ ಪೂಜೆ ನೆರವೇರಿಸಲಾಯಿತು.
ಗುರುಗಳ ಮಾರ್ಗದರ್ಶನದಿಂದ ಆದರ್ಶ ಸಮಾಜ ನಿರ್ಮಿಸಲು ಸಾಧ್ಯ – ನ್ಯಾಯವಾದಿ ಶ್ರೀ ಈಶ್ವರ ಕೊಟ್ಟಾರಿ
ಭಾರತ ಭೂಮಿಯಲ್ಲಿ ಜನ್ಮ ಪಡೆಯಬೇಕಾದರೆ ಪುಣ್ಯ ಮಾಡಿರಬೇಕು. ಹಿಂದೆ ಹೇಗೆ ನಮ್ಮ ದೇಶ ರಾಮ ರಾಜ್ಯವಾಗಿತ್ತು ಆ ಸಮಯದಲ್ಲಿ ಎಲ್ಲಾ ಜನರು ಸುಖಿಗಳಾಗಿದ್ದರು. ನಮ್ಮ ದೇಶ ಈಗ ಭ್ರಷ್ಟಾಚಾರ,ಅನೈತಿಕತೆ, ಮೀಸಲಾತಿ, ಚಳುವಳಿ ಇತ್ಯಾದಿಗಳಿಂದ ಜೀವನ ಕಷ್ಟಕರವಾಗಿದೆ ಎಂದರು.ಆದರೆ ಇವೆಲ್ಲವುಗಳಿಗೆ ನಾವು ವಿರೋಧಿಸದೆ ಹೊಂದಿಕೊಂಡಿದ್ದೇವೆ. ಇವೆಲ್ಲವುಗಳಿಗೆ ಒಂದೇ ಪರಿಹಾರ, ನಾವೆಲ್ಲರೂ ಆದ್ಯಾತ್ಮಿಕ ಸಾಧನೆ ಮಾಡಿ ಇದನ್ನು ಎದುರಿಸಬಹುದು. ಇದಕ್ಕೆ ಗುರುಗಳ ಮಾರ್ಗದರ್ಶನ ಬೇಕು. ಈ ಮಾರ್ಗದರ್ಶನವನ್ನು ಸನಾತನ ಸಂಸ್ಥೆಯು ಸಮಾಜಕ್ಕೆ ಪರಿಪೂರ್ಣವಾಗಿ ನೀಡುತ್ತದೆ. ಅದರ ಲಾಭವನ್ನು ಪಡೆದುಕೊಂಡು ಆದರ್ಶ ಸಮಾಜದ ನಿರ್ಮಾಣ ಮಾಡೋಣ ಎಂದು ಹೇಳಿದರು.
ವಿಶ್ವದಾದ್ಯಂತದ ಜನತೆಗೆ ಗುರುಪೂರ್ಣಿಮೆಯ ಲಾಭವಾಗಬೇಕೆಂದು ಸಮಿತಿಯು ಗುರುಪೂರ್ಣಿಮಾ ಮಹೋತ್ಸವದ ಲೈವ್ ಪ್ರಸಾರವನ್ನೂ ಮಾಡಿದೆ. ಕಾರಣಾಂತರಗಳಿಂದ ಯಾರಿಗಾದರೂ ಪ್ರತ್ಯಕ್ಷ ಕಾರ್ಯಕ್ರಮದಲ್ಲಿ ಸಹಭಾಗಿಯಾಗಲು ಅಡಚಣೆಯುಂಟಾಗಿದ್ದಲ್ಲಿ ಸಮಿತಿಯ ಯೂಟ್ಯೂಬ್ ಚಾನೆಲ್ @HJSKarnataka ಗೆ ಭೇಟಿ ನೀಡಿ Recorded Live ವೀಕ್ಷಿಸಬಹುದೆಂದು ಕರೆ ನೀಡಿದೆ.
ತಮ್ಮ ಸವಿನಯ,
ಶ್ರೀ ವಿಜಯ ಕುಮಾರ
ಹಿಂದೂ ಜನಜಾಗೃತಿ ಸಮಿತಿ
ಸಮನ್ವಯಕರು , ದಕ್ಷಿಣ ಕನ್ನಡ ಜಿಲ್ಲೆ
7204082652