ಮೊಗ್ರು :(ಜು.24) ಯೆನಪೋಯ ಮೆಡಿಕಲ್ ಕಾಲೇಜು, ಯೆನಪೋಯ ವಿಶ್ವವಿದ್ಯಾಲಯ ಸಂಸ್ಥೆಯ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಯೋಗದ ಜಾಗೃತಿ ಮೂಡಿಸಲು ಭವಿಷ್ಯದ ದುಃಖಗಳನ್ನು ದೂರ ಮಾಡಲು ಯೋಗ ಎಂಬ ಧ್ಯೇಯದೊಂದಿಗೆ
ಮುಗೇರಡ್ಕ ಸರಕಾರಿ ಶಾಲಾಭಿವೃದ್ಧಿಗೆ ವಿದ್ಯಾ ನಿಧಿ ಸಂಗ್ರಹಕ್ಕಾಗಿ 25 ಗಂಟೆಗಳ ಮ್ಯಾರಥಾನ್ ಯೋಗ ತರಬೇತಿಯು ಜು.22 ಮತ್ತು 23ರ 10 ಗಂಟೆಯವರೆಗೆ 25 ಗಂಟೆಗಳ ನಿರಂತರ ಯೋಗ ಕಾರ್ಯಕ್ರಮ ನಡೆಯಿತು.
ಯೋಗ ಗುರು ಕುಶಾಲಪ್ಪ ಗೌಡ ರವರು ತಲಾ ಒಂದೂವರೆ ಗಂಟೆಯ 17 ಬ್ಯಾಚ್ ಗಳಲ್ಲಿ ತರಬೇತಿ ನೀಡಿದ್ದು, ಭಾಗವಹಿಸುವ ಶಿಬಿರಾರ್ಥಿಗಳಿಗೆ ರೂಪಾಯಿ 500 ಮೌಲ್ಯದ ಯೋಗ ಪುಸ್ತಕ, ಯೋಗ ಭಟ್ಟೆ, ಯೋಗ ಕ್ಯಾಲೆಂಡರ್,ಯೋಗ ಪ್ರಮಾಣ ಪತ್ರ ಮತ್ತು ಉಪಹಾರ ನೀಡಲಾಯಿತು.
ಮುಗೇರಡ್ಕ ಸರ್ಕಾರಿ ಶಾಲಾ ಸೇವಾ ಟ್ರಸ್ಟ್ ನ ವಿದ್ಯಾನಿಧಿಗಾಗಿ ಆಯೋಜಿಸಿರುವ ಈ ಶಿಬಿರಕ್ಕೆ ವಿದ್ಯಾರ್ಥಿಗಳಿಂದ ರೂಪಾಯಿ 100, ಸಾರ್ವಜನಿಕರಿಂದ ರೂಪಾಯಿ 200 ನ್ನು ದೇಣಿಗೆ ರೂಪದಲ್ಲಿ ಪಡೆಯಿತು.
ಮೂರು ವಿಶ್ವ ದಾಖಲೆಯ ಪ್ರಯತ್ನ, ಮ್ಯಾರಥಾನ್ ಯೋಗ ಶಿಬಿರ ತರಬೇತಿಯ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರ್ಪಡೆಗೊಂಡಿದೆ.
ಮುಗೇರಡ್ಕ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾಭಿಮಾನಿಗಳು, ಟ್ರಸ್ಟಿಗಳು, ಮುಖ್ಯೋಪಾಧ್ಯಾಯರು, ಹಳೆ ವಿದ್ಯಾರ್ಥಿಗಳು ಯೋಗಾಸನ ಶಿಬಿರದಲ್ಲಿ ಭಾಗವಹಿಸಿ ಪ್ರಮಾಣ ಪತ್ರ ಪಡೆದುಕೊಂಡರು.