Wed. Nov 20th, 2024

Mangalore: ತುಳುನಾಡು ಪೊರ್ಲು ಸೇವಾ ಟ್ರಸ್ಟ್(ರಿ.) ದಕ್ಷಿಣ ಕನ್ನಡ ವತಿಯಿಂದ 2 ಅಶಕ್ತ ಕುಟುಂಬಕ್ಕೆ ಆರ್ಥಿಕ ನೆರವು

ಮಂಗಳೂರು:(ಆ.3) ಕಳೆದ 8 ವರ್ಷದಿಂದ ಸಮಾಜಮುಖಿ ಸೇವಾ ಕಾರ್ಯವನ್ನು ಮಾಡುತ್ತಾ ಬಂದಿರುವ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ಸೇವಾ ಕಾರ್ಯದ ಭಾಗವಾಗಿ 2 ಅಶಕ್ತ ಕುಟುಂಬಕ್ಕೆ ಸಹಾಯ ಧನ ಬಿ.ಸಿ ರೋಡ್ ನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ನಡೆಯಿತು.

ಇದನ್ನೂ ಓದಿ: 🛑ಬೆಂಗಳೂರು: ಸಿಕ್ಕೇಬಿಡ್ತು ರೇಣುಕಾಸ್ವಾಮಿ ಕಳಿಸಿದ ಅಶ್ಲೀಲ ಮೆಸೇಜ್‌ – ಪವಿತ್ರಾ ಗೌಡ ಕೊಟ್ಟ ರಿಪ್ಲೈ ಏನು?

ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿರುವ ಕಡಬ ತಾಲೂಕಿನ ಏನೆಕಲ್ಲು ಮಾಧನ ಮನೆತೋಟ ನಿವಾಸಿ ಪದ್ಮಿನಿ ಲಕ್ಷ್ಮಣ ಗೌಡ ದಂಪತಿಗಳ 3 ವರ್ಷದ ಹೆಣ್ಣು ಮಗಳಾದ ವಂಶಿಯ ಚಿಕಿತ್ಸೆಗಾಗಿ 52,875 ರೂಪಾಯಿ ಹಾಗೂ

ಮೆದುಳಿನ ರಕ್ತ ಸ್ರಾವ ಸಮಸ್ಯೆಗೆ ತುತ್ತಾಗಿರುವ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಉಜಿರಡ್ಕ ಚಾರ್ಮತ ನಿವಾಸಿ ಗಂಗಾಧರ ನಾಯ್ಕ್ ಇವರ ಚಿಕಿತ್ಸೆಗೆ 15,000 ರೂಪಾಯಿ ಧನ ಸಹಾಯವನ್ನು ಬಿ.ಸಿ ರೋಡ್ ನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಹಸ್ತಾಂತರ ನಡೆಯಿತು.

ಈ ಸಮಯದಲ್ಲಿ ಟ್ರಸ್ಟ್ ನ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *