ಉಜಿರೆ:(ಆ.16) ಮುಂಡತ್ತೋಡಿ ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಟೈ, ಬೆಲ್ಟ್ , ಐಡಿಯನ್ನು ಆ.12 ರಂದು ವಿತರಿಸಲಾಯಿತು.

ಇದನ್ನೂ ಓದಿ; 🇮🇳ಬೆಳ್ತಂಗಡಿ: ಶಂಸುಲ್ ಹುದಾ ಜುಮ್ಮಾ ಮಸೀದಿ ಕುಂಡಡ್ಕ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾದ ಮೋಹನ್ ಕುಮಾರ್ ರವರು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಟೈ, ಬೆಲ್ಟ್ , ಐಡಿಯನ್ನು ಮೋಹನ್ ಕುಮಾರ್ ರವರು ವಿತರಿಸಿದರು. ಯುವಕ ಮಂಡಲ ಹಾಗೂ ಶಾಲಾ ವತಿಯಿಂದ ಮೋಹನ್ ಕುಮಾರ್ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಉಪಾಧ್ಯಕ್ಷರಾದ ದೇವರಾಜ್ , ಯುವಕ ಮಂಡಲ ಉಪಾಧ್ಯಕ್ಷರಾದ ಗುರುಪ್ರಸಾದ್, ಕಾರ್ಯದರ್ಶಿಗಳಾದ ಸುರೇಶ್ , ಮುಖ್ಯೋಪಾಧ್ಯಾಯರಾದ ಸೇವಂತಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಪ್ರೀತಿ ಕುಮಾರಿ ನಿರೂಪಿಸಿದರು, ಗುರುಪ್ರಸಾದ್ ಸ್ವಾಗತಿಸಿದರು. ಕೋಶಾಧಿಕಾರಿಯಾದ ವೆಂಕಪ್ಪ ಧನ್ಯವಾದ ಸಮರ್ಪಿಸಿದರು. ಪೋಷಕರು, ಎಸ್.ಡಿ.ಎಂ.ಸಿ. ಸದಸ್ಯರು, ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.