ಮಂಗಳೂರು:(ಸೆ.23) ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರನೋರ್ವ ಪವಾಡಸದೃಶವೆಂಬಂತೆ ಪಾರಾಗಿದ್ದಾರೆ.

ಇದನ್ನೂ ಓದಿ: ⭕ಮಂಗಳೂರು : ದಿ.ಮುತ್ತಪ್ಪ ರೈ ಎರಡನೇ ಪತ್ನಿ ಮತ್ತು ಪುತ್ರರ ನಡುವಿನ ಆಸ್ತಿ ವಿವಾದ ಅಂತ್ಯಕ್ಕೆ
ಪ್ರಾಣಾಪಾಯದಿಂದ ಅಶೋಕ್ ಗಾಯಗೊಂಡವರು. ಲಾರಿ ಚಾಲಕನ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ.

ಬೈಕ್ ಗೆ ಲಾರಿ ಢಿಕ್ಕಿಯಾಗಿದೆ. ಸವಾರ ಅಶೋಕ್ ಲಾರಿಯ ಹಿಂದಿನ ಮತ್ತು ಮುಂದಿನ ಚಕ್ರಗಳ ನಡುವೆ ಬಿದ್ದಿದ್ದರಿಂದ ಪ್ರಾಣಾಪಾಯವಾಗಿಲ್ಲ.

ಕೈಗೆ ಗಂಭೀರ ಗಾಯವಾಗಿದ್ದು, ಶಸ್ತ್ರ ಚಿಕಿತ್ಸೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.



