ಯು ಪ್ಲಸ್ ಟಿವಿ ವರದಿಯ ಫಲಶ್ರುತಿ
ಬೆಳ್ತಂಗಡಿ (ಸೆ.29)(ಯು ಪ್ಲಸ್ ಟಿವಿ): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಮೈರೋಳ್ತಡ್ಕ ಬೂತ್ ನ ನಿರುಂಬುಡ -ಸುಣ್ಣಾನ-ನಾವುಳೆ -ಖಂಡಿಗ ಪ್ರದೇಶದಲ್ಲಿ ಒಂದು ಉತ್ತಮವಾದ ರಸ್ತೆಯನ್ನು ಮಾಡಿಕೊಡಿ ಎಂದು ಅಲ್ಲಿನ ನಿವಾಸಿಗಳು ಹಲವಾರು ವರ್ಷಗಳಿಂದ ಬೇಡಿಕೆಯನ್ನು ಇಡುತ್ತಾ ಬಂದಿದ್ದರು.
ಇದನ್ನೂ ಓದಿ: 🌸ಧರ್ಮಸ್ಥಳದಲ್ಲಿ 26ನೇ ವರ್ಷದ ಭಜನಾ ತರಬೇತಿ ಕಮ್ಮಟ ಸಮಾರೋಪ ಸಮಾರಂಭ
ಇತ್ತ ಈ ವರದಿಯನ್ನು ನಮ್ಮ ಯು ಪ್ಲಸ್ ವಾಹಿನಿಯಲ್ಲಿ ಪ್ರಸಾರ ಮಾಡಿ ಉತ್ತಮ ಗುಣಮಟ್ಟದ ರಸ್ತೆಯನ್ನು ಮಾಡಿಕೊಂಡುವಂತೆ ಶಾಸಕರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯ ಕೂಡ ಮಾಡಲಾಗಿತ್ತು.
ಇದೀಗ ನಮ್ಮ ವರದಿಗೆ ಹಾಗೂ ಅಲ್ಲಿನ ನಿವಾಸಿಗಳ ಮನವಿಗೆ ಉತ್ತಮ ಸ್ಪಂದನೆ ದೊರಕಿದೆ. ಈ ವ್ಯಾಪ್ತಿಯಲ್ಲಿ ಬೆಳ್ತಂಗಡಿ ಶಾಸಕರಾಗಿರುವ ಹರೀಶ್ ಪೂಂಜಾರವರ ನೇತೃತ್ವದಲ್ಲಿ ಸುಮಾರು 2.55 ಕಿ.ಮೀ ಉದ್ದದ ರಸ್ತೆಯನ್ನು 3 ಕೋಟಿ 30 ಲಕ್ಷ ಅನುದಾನದಲ್ಲಿ ಕಾಂಕ್ರೀಟ್ ರಸ್ತೆಯನ್ನಾಗಿ ನಿರ್ಮಾಣ ಮಾಡಲಾಗಿದೆ.
ಇನ್ನೂ ಕೆಲವೇ ದಿನಗಳಲ್ಲಿ ಈ ರಸ್ತೆಯನ್ನು ಜನರ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಈ ರಸ್ತೆಯ ಕಾಮಗಾರಿಯು 2023 ರ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಆದ್ರೆ ಕೆಲವು ಕಾರಣಗಳಿಂದ ರಸ್ತೆ ಕಾಮಗಾರಿ ಕುಂಟುತ್ತ ಸಾಗಿದ್ದು ತಡವಾದರೂ ಉತ್ತಮ ಗುಣಮಟ್ಟದ ರಸ್ತೆಯನ್ನು ಶಾಸಕರು ನಿರ್ಮಾಣ ಮಾಡಿಕೊಟ್ಟಿದ್ದಾರೆ ಎನ್ನುವ ನೆಮ್ಮದಿಯ ನಿಟ್ಟುಸಿರನ್ನು ಗ್ರಾಮಸ್ಥರು ಬಿಟ್ಟಿದ್ದಾರೆ.