ಪುತ್ತೂರು:(ಅ.8) ಉಡುಪಿ – ದಕ್ಷಿಣ ಕನ್ನಡ ವಿಧಾನ ಪರಿಷತ್ ಸ್ಥಾನಕ್ಕೆ ನಡೆಯುವ ಉಪ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಸಂಚಾಲಕ , ಸಹ ಸಂಚಾಲಕರನ್ನು ನೇಮಕಗೊಳಿಸಿದೆ.
ಇದನ್ನೂ ಓದಿ: 🔴ಪುತ್ತೂರು : ಹುಲಿಗೊಬ್ಬು ಕಾರ್ಯಕ್ರಮದಲ್ಲಿ ಗಮನಸೆಳೆದ ಸ್ವಚ್ಛತೆ
ಪುತ್ತೂರು ವಿಧಾನ ಸಭಾ ಕ್ಷೇತ್ರದ ಚುನಾವಣಾ ಸಂಚಾಲಕರಾಗಿ ಗ್ರಾಮಾಂತರ ಮಂಡಲ ನಿಕಟಪೂರ್ವ ಪ್ರ.ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ , ಹಾಗೂ ಸಹ ಸಂಚಾಲಕರಾಗಿ ನಗರ ಮಂಡಲ ಉಪಾಧ್ಯಕ್ಷರಾಗಿರುವ ಸಂತೋಷ್ ಕುಮಾರ್ ಕೈಕಾರ ಇವರನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷರು ಸಮಿತಿ ನಿಯುಕ್ತಿಗೊಳಿಸಿರುತ್ತಾರೆ.
ಅಕ್ಟೋಬರ್ 21 ರಂದು ಚುನಾವಣೆ ನಡೆಯಲಿದೆ. ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರಿಗೆ ಮತದಾನ ಮಾಡುವ ಅವಕಾಶ ಇರುತ್ತದೆ.
Appointment of Election Convenor, Co-convenor, Puttur