Wed. Nov 20th, 2024

Kasaragod: ಉದ್ಯೋಗ ನೀಡುವುದಾಗಿ ಭರವಸೆ – ಆಕೆಯ ಮೋಸದ ಜಾಲಕ್ಕೆ ಬಿದ್ದವರೆಷ್ಟು ಮಂದಿ ಗೊತ್ತಾ? ಅಷ್ಟಕ್ಕೂ ಈ ಸಚಿತಾ ರೈ ಅಸಲಿ ರಹಸ್ಯವೇನು?

ಕಾಸರಗೋಡು:(ಅ.9) ಡಿವೈಎಫ್ಐ ಮುಖಂಡೆಯೊಬ್ಬಳು ಕೇಂದ್ರ ಸರಕಾರಿ ನೌಕರಿ ಕೊಡಿಸುವುದಾಗಿ ಭರವಸೆ‌ ನೀಡಿ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ. ನೌಕರಿ ಕೊಡಿಸುವುದಾಗಿ ಹೇಳಿ ವಂಚಿಸಿದ ಆರೋಪದ ಮೇಲೆ ಡಿವೈಎಫ್‌ಐ ಮುಖಂಡೆ, ಶಾಲಾ ಶಿಕ್ಷಕಿಯ ಮೇಲೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: 🟣ಸುಳ್ಯ: ಭಾಜಪಾ ಯುವ ಮೋರ್ಚಾ ಸುಳ್ಯ ಮಂಡಲದ ವತಿಯಿಂದ

ಬಿಜೆಪಿ-ಆರ್‌ಎಸ್‌ಎಸ್ ಸಿದ್ಧಾಂತದ ವಿರುದ್ದ ಸದಾ ಟೀಕೆ, ವ್ಯಂಗ್ಯವಾಡುತ್ತಿದ್ದ ಸಚಿತಾ ರೈ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ‌. ಕೇಂದ್ರ ಸಚಿವಾಲಯದ ಅಧೀನದಲ್ಲಿರುವ ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ (ಸಿಪಿಸಿಆರ್‌ಐ) ಹುದ್ದೆಯ ಭರವಸೆ ನೀಡಿ ಯುವತಿಗೆ 15 ಲಕ್ಷ ರೂಪಾಯಿ ವಂಚಿಸಿದ್ದಾರೆ.

ಐಪಿಸಿಯ ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಸಚಿತಾ ರೈ ವಿರುದ್ಧ ಪ್ರಕರಣ ದಾಖಲಿಸಿರುವ ಕುಂಬಳೆ ಪೊಲೀಸರು, ಆಕೆ ಅನೇಕ ಉದ್ಯೋಗಾಕಾಂಕ್ಷಿಗಳಿಂದ ಸುಮಾರು 2 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದಾಳೆ ಎಂಬ ಸ್ಪೋಟಕ ಅಂಶ‌ ಮುನ್ನಲೆಗೆ ಬಂದಿದೆ.

ಕಾಸರಗೋಡಿನ ಕಿದೂರಿನ ನಿಶ್ಮಿತಾ ಶೆಟ್ಟಿ (24) ಎಂಬುವರ ದೂರಿನ ಆಧಾರದ ಮೇಲೆ ಕುಂಬಳ ಪೊಲೀಸರು ಸಚಿತಾ ರೈ ವಿರುದ್ಧ ಐಪಿಸಿ ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅವರು ಮೇ 31 ಮತ್ತು ಆಗಸ್ಟ್ 23, 2023 ರ ನಡುವೆ ಹಲವಾರು ಹಂತಗಳಲ್ಲಿ ಬ್ಯಾಂಕ್ ಮತ್ತು GPay ಮೂಲಕ 15,05,796 ರೂ.ಗಳನ್ನು ರೈಗೆ ವರ್ಗಾಯಿಸಿದ್ದಾರೆ.

“ನಾನು ಸಚಿತಾ ಅವರ ಬಗ್ಗೆ ಇನ್ನೊಬ್ಬ ಉದ್ಯೋಗಾಕಾಂಕ್ಷಿ ಮೂಲಕ ತಿಳಿದುಕೊಂಡಿದ್ದೇನೆ. ಸಚಿತಾ ಅವರು ನನಗೆ CPCRI ನಲ್ಲಿ ಕೆಲಸ ಮಾಡಲು ಸಹಾಯ ಮಾಡಬಹುದೆಂದು ಹೇಳಿದ್ದರು. ಸಚಿತಾ ತುಂಬಾ ಶ್ರೀಮಂತ ಆದರೆ ನಾನು ನನ್ನ ಪತಿಯಿಂದ ಸಾಲ ಮಾಡಿ ನನ್ನ ಆಭರಣಗಳನ್ನು ಗಿರವಿ ಇಟ್ಟು ಹಣವನ್ನು ಸಂಗ್ರಹಿಸಿದ್ದೇನೆ. ಶಿಕ್ಷಕಿಯಾಗಿದ್ದುಕೊಂಡು ನನಗೆ ಮೋಸ ಮಾಡುತ್ತಾಳೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ” ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *