ಸುರತ್ಕಲ್ :(ಅ.30) “ನನ್ನ ಜತೆ ಸಹಕರಿಸು, ಇಲ್ಲಾಂದ್ರೆ 24 ತುಂಡು ಮಾಡುವೆ” ಎಂದು ಬೆದರಿಕೆ ಸಂದೇಶ ಕಳುಹಿಸಿ ಮುಸ್ಲಿಂ ಯುವಕನೊಬ್ಬನ ನಿರಂತರ ಕಿರುಕುಳದಿಂದ ಬೇಸತ್ತ ಯುವತಿ ಆತ್ಮಹತ್ಯೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆರೋಪಿಗೆ ಜಾಮೀನು ದೊರಕಿದೆ.
ಇದನ್ನೂ ಓದಿ: 🟠ಉಜಿರೆ: ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ “ಕುಕ್ಕಿಂಗ್ ವಿತೌಟ್ ಫೈರ್ ” ಸ್ಪರ್ಧೆ
ಸುರತ್ಕಲ್ ಇಡ್ಯಾದ ಸದಾಶಿವನಗರದ ನಿವಾಸಿ ಶಾರಿಕ್ ಹಾಗೂ ಆತನ ತಾಯಿ ನೂರ್‌ಜಹಾನ್ ಎಂಬವರು ಹಿಂದೂ ಯುವತಿಗೆ ಕಿರುಕುಳ ನೀಡುತ್ತಿದ್ದರು. ನಿರಂತರ ಕಿರುಕುಳದಿಂದ ಬೇಸತ್ತಿದ್ದಳು ಮತ್ತು ಆತ್ಮಹತ್ಯೆ ಯತ್ನ ಮಾಡಿದ್ದು, “ಅನ್ಯಮತೀಯನ ಕೈಯಲ್ಲಿ ಸಾಯುವುದಕ್ಕಿಂತ, ಈಗಲೇ ಸಾಯುತ್ತೇನೆ” ಎಂದು ಡೆತ್ ನೋಟ್ ಬರೆದಿದ್ದಾಳೆ. ಇದರಲ್ಲೂ ಶಾರಿಕ್ ಮತ್ತು ನೂರ್‌ಜಹಾನ ನನ್ನು ಬಿಡಬಾರದು ಎಂದು ಬರೆದಿದ್ದಳು.
ಈ ಸಂಬಂಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು ಜೊತೆಗೆ ಆತನ ಬಂಧನಕ್ಕೆ ಆಗ್ರಹಿಸಲಾಗಿತ್ತು, ನಂತರ ಆರೋಪಿ ಶಾರಿಕ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದರು.
ಈಗ ಶಾರಿಕ್ ಗೆ ಜಾಮೀನು ದೊರಕಿರುವುದು ಯುವತಿಯ ಸಂರಕ್ಷಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟಿಸಿದೆ. ವಿ ಎಚ್ ಪಿ, ಹಿಂದೂ ಜಾಗರಣ ವೇದಿಕೆ, ಹಿಂದೂ ಮಹಾಸಭಾ ಮತ್ತು ಸ್ಥಳೀಯರು, ಆರೋಪಿ ಮೇಲಿನ ಸರಳ ಕ್ರಮಗಳನ್ನು ಕೈಗೊಂಡ ವಿಷಯದ ಬಗ್ಗೆ ಪ್ರಾರಂಭದಲ್ಲೇ ತೀವ್ರವಾಗಿ ಖಂಡಿಸಿದ್ದಾರೆ ಹಾಗೂ ಇದರಿಂದ ಉಂಟಾಗುವ ಯುವತಿಯ ಸಂರಕ್ಷಣೆಯ ಕುರಿತು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಘಟನೆ ವಿವರ:
ಅ.22ರಂದು ಮಂಗಳೂರು ಮಧ್ಯ ಗ್ರಾಮದ ಯುವತಿಯೋರ್ವಳ ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಿದ್ದ ಶಾರಿಕ್, ಅಶ್ಲೀಲ ಮತ್ತು ಬೆದರಿಕೆ ಸಂದೇಶಗಳನ್ನು ಯುವತಿಯ ಅಣ್ಣನಿಗೆ ಮತ್ತು ಅವರ ಸ್ನೇಹಿತರಿಗೆ ಕಳುಹಿಸಲಾಗಿದೆ ಎಂಬ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು.
ಅ.24 ರಂದು, ಯುವತಿಗೆ ಮತ್ತೊಂದು ಬೆದರಿಕೆ ಸಂದೇಶ ಬಂದಿದ್ದು, ಇದರಿಂದಾಗಿ ಅವಳು ಮಾನಸಿಕ ತೊಂದರೆಗೊಳಗಾಗಿದ್ದರು. ತೀವ್ರ ನೊಂದ ಮನಸ್ಥಿತಿಯಲ್ಲಿ, ಶಾರೀಕ್ ಮತ್ತು ಅವರ ತಾಯಿ ನೂರ್ ಜಹಾನ್ ರವರ ಕಿರುಕುಳದಿಂದ ಆತ್ಮಹತ್ಯೆಗೆ ತೀರ್ಮಾನಿಸಿರುವುದಾಗಿ ಪತ್ರ ಬರೆದು, 10 ಮಾತ್ರೆಗಳು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಘಟನೆಯ ಬಳಿಕ, ಯುವತಿ ಮಾಹಿತಿ ನೀಡಿದ ಪ್ರಕಾರ, ಶಾರೀಕ್ ಅವರ ನಿರಂತರ ಕಿರುಕುಳದಿಂದ ತಾನು ಭೀತಿಯಾಗಿದ್ದೇನೆ ಎಂದು ತಿಳಿಸಿದ್ದಾರೆ. ಇದರ ಆಧಾರದಲ್ಲಿ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 125/24 ಅನ್ನು ಭಾರತೀಯ ದಂಡ ಸಂಹಿತೆಯ 78(1)(I), 351(1 & 2) ಮತ್ತು 3(5) ಸೆಕ್ಷನ್ ಅಡಿಯಲ್ಲಿ ದೋಷಾರೋಪಣೆ ಮಾಡಿ ಶಾರಿಕ್ ನನ್ನು ಬಂಧಿಸಿದ್ದರು. ಆರೋಪಿಗೆ ಜಾಮೀನು ದೊರಕಿದೆ.