ಉತ್ತರ ಪ್ರದೇಶ:(ನ.12) ಉತ್ತರ ಪ್ರದೇಶದ ಕನೌಜ್ನ ಮಧೋನಗರ ಗ್ರಾಮದ ಜಾತ್ರೆಯೊಂದರಲ್ಲಿ ನಡೆದ ಭೀಕರ ಅಪಘಾತದಲ್ಲಿ 13 ವರ್ಷದ ಅನುರಾಧಾ ಕಥೇರಿಯಾ ಎಂಬ ಬಾಲಕಿಯ ಕೂದಲು ಸ್ವಿಂಗ್ ರೈಡ್ನ ಯಂತ್ರಕ್ಕೆ ಸಿಲುಕಿ ಗಂಭೀರವಾದ ಗಾಯಗಳಾಗಿದ್ದು, ಆಕೆಯ ನೆತ್ತಿ ಕಿತ್ತುಹೋಗಿದೆ.
ಇದನ್ನೂ ಓದಿ: ⭕ನೆಲಮಂಗಲ: ಆಸ್ತಿ ಕೊಟ್ಟಿಲ್ಲವೆಂದು ಮನನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ!!
ಈ ಘಟನೆಯ ವಿಡಿಯೋದಲ್ಲಿ ರಾಡ್ನಿಂದ ಅವಳ ನೆತ್ತಿ ನೇತಾಡುತ್ತಿರುವುದನ್ನು ತೋರಿಸುತ್ತದೆ. ಆಕೆಯ ಸುತ್ತಲೂ ಇದ್ದವರು ಸ್ವಿಂಗ್ ಅನ್ನು ನಿಲ್ಲಿಸಲು ಪ್ರಯತ್ನಿಸಿದರು. ಆದರೆ, ಅಷ್ಟರೊಳಗೆ ಆಕೆಯ ನೆತ್ತಿಯ ಕೂದಲು ಹಾಗೂ ಚರ್ಮವೂ ಕಿತ್ತುಬಂದಾಗಿತ್ತು.
ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವದಿಂದ ಅನುರಾಧ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಆಕೆಯ ಕುಟುಂಬವು ಆರಂಭದಲ್ಲಿ ಅವಳನ್ನು ಗುರ್ಸಹೈಗಂಜ್ನಲ್ಲಿರುವ ಖಾಸಗಿ ಆಸ್ಪತ್ರೆಗೆ ಸಾಗಿಸಿತು, ಆದರೆ ಆಕೆಯ ಸ್ಥಿತಿಯು ಹದಗೆಟ್ಟಿದ್ದರಿಂದ, ಅವಳನ್ನು ಪಿಜಿಐಗೆ ಕರೆದುಕೊಂಡು ಹೋಗಲಾಯಿತು. ವಿಶೇಷ ಚಿಕಿತ್ಸೆಗಾಗಿ ಲಕ್ನೋಗೆ ಸೇರಿಸಲಾಯಿತು. ಈಗಲೂ ಆಕೆ ಚಿಂತಾಜನಕ ಸ್ಥಿತಿಯಲ್ಲಿಯೇ ಉಳಿದಿದ್ದಾಳೆ.
ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸ್ವಿಂಗ್ ನಿಲ್ಲುವ ವೇಳೆಗೆ ಸಂಪೂರ್ಣ ನೆತ್ತಿ ಕಿತ್ತು ಹೋಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಕನೌಜ್ನ ತಾಲ್ಗ್ರಾಮ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾಧೋನಗರ ಗ್ರಾಮದಲ್ಲಿ ಜಾತ್ರೆಯ ವೇಳೆ ಈ ಅವಘಡ ಸಂಭವಿಸಿದೆ.