Wed. Nov 20th, 2024

Puttur: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ

ಪುತ್ತೂರು:(ನ.14) ಇತಿಹಾಸ ಪ್ರಸಿದ್ಧ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ನಿಯಮ ಜಾರಿಯಾಗಿದೆ. ಹಿಂದೂಪರ ಸಂಘಟನೆಗಳು ಕಳೆದ ಹಲವು ವರ್ಷಗಳಿಂದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡ್ರೆಸ್ ಕೋಡ್ ಜಾರಿಗೆ ಮನವಿ ಮಾಡಿತ್ತು.

ಇದನ್ನೂ ಓದಿ: ⭕ಕೊಪ್ಪ: ಡೆತ್‌ ನೋಟ್‌ ಬರೆದಿಟ್ಟು ದಂಪತಿ ಆತ್ಮಹತ್ಯೆ..!

ಇದೀಗ ದೇವಸ್ಥಾನದ ಆಡಳಿತ ದೇವಸ್ಥಾನದ ಮುಖ್ಯ ದ್ವಾರದ ಬಳಿಯೇ ಸೂಚನಾ ಫಲಕನ್ನು ಹಾಕಲಾಗಿದ್ದು, ಹೆಚ್ಚಾಗಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಈ ವಸ್ತ್ರಸಂಹಿತೆ ಅಳವಡಿಸಲಾಗಿದೆ.

ಇನ್ನು ಮುಂದೆ ತಮಗೆ ತೋಚಿದ ಡ್ರೆಸ್ ಹಾಕಿಕೊಂಡು‌ ದೇವರ ದರ್ಶನ ಪಡೆಯುವಂತಿಲ್ಲ. ಪುರುಷರು ಪ್ಯಾಂಟ್ ಮತ್ತು ಅಂಗಿ ಅಥವಾ ಲುಂಗಿ ಮತ್ತು ಅಂಗಿ ಧರಿಸಿ‌ ದೇವಸ್ಥಾನದ ಒಳಗೆ ಪ್ರವೇಶಿಸಬೇಕು. ಅದೇ ರೀತಿ ಮಹಿಳೆಯರು ಚೂಡಿದಾರ್ ಅಥವಾ ಸೀರೆ ಹಾಕಿಕೊಂಡು ದೇವರ ದರ್ಶನ ಪಡೆಯಬೇಕಿದೆ.

ಹೌದು ಕಳೆದ ಹಲವು ವರ್ಷಗಳಿಂದ ಹತ್ತೂರಿನ ಒಡೆಯ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಭಕ್ತರ ಮತ್ತು ಹಿಂದೂಪರ ಸಂಘಟನೆಗಳ ಮನವಿಗೆ ಇದೀಗ ಸ್ಪಂದನೆ ಸಿಕ್ಕಿದೆ. ದೇವಸ್ಥಾನದ ಒಳಗೆ ಬರುವ ಭಕ್ತರಿಗೆ ವಸ್ತ್ರಸಂಹಿತೆ ಜಾರಿ ಮಾಡಬೇಕೆಂದು ಸಂಘಟನೆಗಳು ಮತ್ತು ಭಕ್ತರು ದೇವಸ್ಥಾನಕ್ಕೆ ಮನವಿ ಮಾಡಿಕೊಂಡೇ ಬರುತ್ತಿದ್ದವು.

ದೇವಸ್ಥಾನದ ಈ ಹಿಂದಿನ ವ್ಯವಸ್ಥಾಪನಾ ಸಮಿತಿ ಈ ಸಂಬಂಧ ದೇವಸ್ಥಾನದ ಪ್ರವೇಶ ದ್ವಾರದ ಬಳಿ ಈ ಸಂಬಂಧ ಒಂದು ಸೂಚನಾ ಫಲಕವನ್ನೂ ಅಳವಡಿಸಿತ್ತು. ಆದರೆ ಕೆಲವೇ ದಿನಗಳು ಆ ಸೂಚನಾ ಫಲಕ ಮೂಲೆ ಗುಂಪಾಗಿತ್ತು. ಆದರೆ ಇದೀಗ ದೊಡ್ಡ ಬೋರ್ಡನ್ನು ಮುಖ್ಯ ದ್ವಾರದ ಬಳಿ ಅಳವಡಿಸಲಾಗಿದ್ದು, ಭಕ್ತರು ಈ ಫಲಕದಲ್ಲಿರುವ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.

Leave a Reply

Your email address will not be published. Required fields are marked *