Tue. Mar 25th, 2025

shortest person: He is the shortest person in the world! You will be surprised to hear his height!ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯ ಎತ್ತರವು ವಿಭಿನ್ನವಾಗಿರುತ್ತದೆ.

ಕೆಲವರು ತುಂಬಾ ಎತ್ತರ ಮತ್ತು ಕೆಲವರು ತುಂಬಾ ಗಿಡ್ಡಗಿರುತ್ತಾರೆ. ಇನ್ನು ಕೆಲವರು ಸರಾಸರಿ ಉದ್ದವನ್ನು ಹೊಂದಿರುತ್ತಾರೆ. ಆದರೆ ಜಗತ್ತಿನಲ್ಲಿ ಅತ್ಯಂತ ಕಡಿಮೆ ಎತ್ತರವನ್ನು ಹೊಂದಿರುವ ವ್ಯಕ್ತಿಯನ್ನು ನೋಡಿದ್ದೀರಾ? ಇಲ್ಲಿದೆ ಮಾಹಿತಿ….


ವಿಶ್ವದ ಅತಿ ಕುಬ್ಜ ವ್ಯಕ್ತಿ ಪ್ರಸ್ತುತ ಕೊಲಂಬಿಯಾದವರು. ಹೆಸರು ಎಡ್ವರ್ಡ್ ನಿನೋ. ಅವರು 10 ಮೇ 1986 ರಂದು ಬಾಗೋಟಾದಲ್ಲಿ ಜನಿಸಿದರು. ಅವರ ಹೆಸರು ಮೊದಲು 13 ಏಪ್ರಿಲ್ 2010 ರಂದು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ನಲ್ಲಿ ಕಾಣಿಸಿಕೊಂಡಿತು. ಆ ಸಮಯದಲ್ಲಿ ಅವರ ಉದ್ದ70.21 ಸೆಂಟಿಮೀಟರ್ ಆಗಿತ್ತು. ಅಂದರೆ, ಆರು ತಿಂಗಳ ಮಗುವಿನ ಎತ್ತರ ಇದಾಗಿದೆ.

ನಂತರ ಎಡ್ವರ್ಡ್ ನಿನೊ ಅವರ ದಾಖಲೆಯನ್ನು ನೇಪಾಳದ ಖಗೇಂದ್ರ ಥಾಪಾ ಮುರಿದರು. 14 ಅಕ್ಟೋಬರ್ 1992ರಂದು ಜನಿಸಿದ ಥಾಪಾ ಅವರ ಎತ್ತರವನ್ನು67.08 ಸೆಂ (2 ಅಡಿ 2.41 ಇಂಚು) ಎಂದು ದಾಖಲಿಸಲಾಗಿದೆ. ಆದರೆ 17 ಜನವರಿ 2020 ರಂದು, ಖಗೇಂದ್ರ 27 ನೇ ವಯಸ್ಸಿನಲ್ಲಿ ನಿಧನರಾದರು. ಆದರೀಗ ಎಡ್ವರ್ಡ್ ಎಲ್ಲರ ಕಣ್ಣುಗಳಲ್ಲಿ ಗುರುತಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಗಿನ್ನೆಸ್ ದಾಖಲೆಯು ಅವರ ಪಾಲಿಗಿದೆ.


ಎಡ್ವರ್ಡ್ ನಾಲ್ಕು ವರ್ಷ ವಯಸ್ಸಿನವನಾಗಿದ್ದಾಗ, ಅವನು ತನ್ನ ಸ್ನೇಹಿತರಂತೆ ಬೆಳೆಯುತ್ತಿಲ್ಲ ಎಂದು ಅವನ ಕುಟುಂಬಕ್ಕೆ ತಿಳಿಯಿತು. ನಂತರ ಅವರ ಪೋಷಕರು ವೈದ್ಯರಿಗೆ ತೋರಿಸಿದರು. ಬಳಿಕ ತೀವ್ರವಾದ ಹೈಪೋಥೈರಾಯ್ಡಿಸಮ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಯಿತು.


ಎಡ್ವರ್ಡ್ ಯಾವಾಗಲೂ ತಮ್ಮ ಜೀವನವನ್ನು ಆನಂದಿಸುತ್ತಿದ್ರು. ಅವರು ಸಂಪೂರ್ಣ ಶಕ್ತಿಯಿಂದ ಪ್ರತಿಕೂಲತೆಯನ್ನು ಎದುರಿಸಲು ಪ್ರಯತ್ನಿಸುತ್ತಿದ್ರು. ಎಡ್ವರ್ಡ್ ತನ್ನ ಕುಟುಂಬದೊಂದಿಗೆ ಸಮಯ ಕಳೆಯುವುದನ್ನು ಆನಂದಿಸುತ್ತಿದ್ರು ಮತ್ತು ಹೊಸ ಪದಗಳನ್ನು ಹುಡುಕುವುದು, ಕಾರ್ಡ್ಗಳನ್ನು ಆಡುವುದು ಮತ್ತು ವ್ಯಾಯಾಮ ಮಾಡುವುದರಲ್ಲಿ ತನ್ನ ಬಿಡುವಿನ ಸಮಯವನ್ನು ಕಳೆಯುವುದು ಅವರ ಹವ್ಯಾಸಗಳು. ಮಾಡೆಲ್ ಆಗಿಯೂ ಕೆಲಸ ಮಾಡುತ್ತಿದ್ದ ಇವರಿಗೆ ಡ್ಯಾನ್ಸ್ ಮಾಡುವುದು ಅಂದ್ರೆ ಫ್ಯಾಶನ್. ಅವರು ನೃತ್ಯ ಮಾಡುವಾಗ, ಕೋಣೆಯಲ್ಲಿನ ಎಲ್ಲಾ ಕಣ್ಣುಗಳು ಅವರ ಮೇಲೆ ಸ್ಥಿರವಾಗಿರುತ್ತಿತ್ತಂತೆ.


ಎಡ್ವರ್ಡ್ ತನ್ನ ಹೆತ್ತವರು ಮತ್ತು ಒಡಹುಟ್ಟಿದವರೊಂದಿಗೆ ಬೊಗೋಟಾ ಬಳಿಯ ದೇಶದ ಮನೆಯಲ್ಲಿ ವಾಸವಾಗಿದ್ರು. ಅವರಿಗೆ ತನ್ನ ಮನೆಯನ್ನು ನೋಡಿಕೊಳ್ಳುವುದೆಂದರೆ ತುಂಬಾ ಇಷ್ಟವಂತೆ. ವಿಶೇಷವಾಗಿ ಅವರು ತಮ್ಮ ಕೋಣೆಯನ್ನು ಸಂಘಟಿಸಲು ಇಷ್ಟಪಡುತ್ತಿದ್ರು. ಮನೆ ಗುಡಿಸುವುದು ಜೊತೆಗೆ ತಮ್ಮ ಪ್ರಾಣಿಗಳಿಗೆ ಆಹಾರ ಹಾಕುವುದು ಅಂದ್ರೆ ಅವರಿಗೆ ಇಷ್ಟ. ಅವರು ಕೋಳಿಗಳು, ಹಂದಿಗಳು, ಹಸುಗಳು ಮತ್ತು ಮೊಲಗಳನ್ನ ಸಾಕುತ್ತಿದ್ರು ಎನ್ನಲಾಗಿದೆ.

Leave a Reply

Your email address will not be published. Required fields are marked *