Mon. Feb 17th, 2025

ನವದೆಹಲಿ:(ಜು.17) ಬುಧವಾರದ ಹೊತ್ತಿಗೆ ಚಿನ್ನದ ದರ ಮತ್ತಷ್ಟು ಗಗನಕ್ಕೇರಿದೆ. ಅಮೆರಿಕದ ಬಡ್ಡಿದರ ಕಡಿತದ ಕುರಿತಂತೆ ಫೆಡರಲ್ ರಿಸರ್ವ್ ಅಧಿಕಾರಿಗಳ ನೀಡಿರುವ ಹೇಳಿಕೆ ಬೆನ್ನಲ್ಲೇ ಆಷಾಢದಲ್ಲೂ ಚಿನ್ನದ ದರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.

ಹಿಂದಿನ ಅವಧಿಯಲ್ಲಿ 2,473.18 ಡಾಲರ್ ರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ ಬಳಿಕ, 0046 ಜಿಎಂಟಿ ಯ ಪ್ರಕಾರ ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ 2,470.89 ಡಾಲರ್ ಕ್ಕೆ 0.1% ಹೆಚ್ಚಾಗಿದೆ.

ಇದನ್ನೂ ಓದಿ:https://uplustv.com/2024/07/17/mangalore-d-k-the-who-

ಹೀಗಾಗಿ ಅಮೆರಿಕದ ಚಿನ್ನದ ದರ 2,473.70 ಡಾಲರ್ ಗೆ ಹೆಚ್ಚದೆ ಅಂದರೆ 0.3% ಏರಿಕೆಯಾಗಿದೆ ಎಂದು ವರದಿಯಾಗಿದೆ.


ಸಿಎಂಇ ಯ ಫೆಡ್‌ವಾಚ್ ಟೂಲ್ ಪ್ರಕಾರ, ಫೆಡರಲ್ ರಿಸರ್ವ್ ತನ್ನ ಸೆಪ್ಟೆಂಬರ್ ಸಭೆಯಲ್ಲಿ ಕನಿಷ್ಠ 25 ಬೇಸಿಸ್ ಪಾಯಿಂಟ್‌ಗಳ ದರ ಕಡಿತ ಮಾಡುವ ಸಾಧ್ಯತೆ ಇದೆ ಎಂದು ಅಂದಾಜಿಸಿದೆ.

ಇದರಿಂದಾಗಿ ಮಾರುಕಟ್ಟೆಗಳು ಸಂಪೂರ್ಣವಾಗಿ ಬೆಲೆ ನಿಗದಿಪಡಿಸುತ್ತಿವೆ ಎಂದು ರಾಯಿಟರ್ಸ್ ವರದಿ ಮಾಡಿತ್ತು.


ಇನ್ನು ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಂತರರಾಷ್ಟ್ರೀಯ ಹಣಕಾಸು ನಿಧಿ, ಸದ್ಯ ಅಮೆರಿಕದಲ್ಲಿ ಎಲ್ಲಾ ಚಟುವಟಿಕೆಗಳು ಸರಿಯಾಗಿ ನಡೆಯುತ್ತಿದೆ.

ಅಲ್ಲದೇ ಬಳಕೆ ಮತ್ತು ರಫ್ತುಗಳ ಮಧ್ಯೆ ಜಾಗತಿಕ ಆರ್ಥಿಕತೆಯು ಮುಂದಿನ ಎರಡು ವರ್ಷಗಳಲ್ಲಿ ಸಾಧಾರಣ ಬೆಳವಣಿಗೆಗೆ ನಡೆಯಲಿದೆ. ಹೀಗಾಗಿ ಮಾರುಕಟ್ಟೆಗಳು ಸ್ಥಿರವಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.

ಇಂದಿನ ಭಾರತದ ಚಿನ್ನದ ದರ ಎಷ್ಟು?
24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ ಬುಧವಾರದಂದು 7,402 ರೂ. ಇದೆ. ಮಂಗಳವಾರ 7,364 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 38 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 59,216 ರೂ. ನೀಡಬೇಕು. ನಿನ್ನೆ 58,912 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 304 ರೂ. ಹೆಚ್ಚಾಗಿದೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು