ಬೆಳ್ತಂಗಡಿ:(ಜು.18) ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಉಜಿರೆಯ ಕರ್ನಾಟಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (BCM) ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳಿಗೆ ನಾಯಕತ್ವ ತರಬೇತಿ ಕಾರ್ಯಕ್ರಮವನ್ನು ಜುಲೈ 14ರಂದು ಹಮ್ಮಿಕೊಂಡಿತ್ತು.
ಇದನ್ನೂ ಓದಿ: https://uplustv.com/2024/07/18/daily-horoscope-thinking-about-buying-land-for-this-zodiac-sign-today/
ಜೆಸಿಐ ಭಾರತದ ಅಮೃತ ಮಹೋತ್ಸವದ ಪ್ರಯುಕ್ತ ನಡೆಯುತ್ತಿರುವ ಸರಣಿ ತರಬೇತಿ ಕಾರ್ಯಕ್ರಮವನ್ನು, ಗ್ರಾಮ ಪಂಚಾಯತ್ ಉಜಿರೆಯ ಉಪಾಧ್ಯಕ್ಷರಾದ ಶ್ರೀ ರವಿ ಪೂಜಾರಿ ಬರಮೇಲು ಕಾರ್ಯಕ್ರಮವನ್ನು ಉದ್ಘಾಟಿಸಿ, ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಕಾರ್ಯಕ್ರಮಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ರಂಜಿತ್ ಎಚ್. ಡಿ ವಹಿಸಿ, ಜೀವನದಲ್ಲಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ತರಬೇತಿಯ ಮಹತ್ವ ವನ್ನು ವಿವರಿಸಿ ಎಲ್ಲರನ್ನು ಸ್ವಾಗತಿಸಿದರು.
ವಲಯ ತರಬೇತುದಾರರು, ಘಟಕದ ಉಪಾಧ್ಯಕ್ಷರಾದ ಹೇಮಾವತಿ.ಕೆ ಇವರು ತರಬೇತಿಯನ್ನು ಅತ್ಯುತ್ತಮವಾಗಿ ನಡೆಸಿಕೊಟ್ಟರು. 40 ವಿದ್ಯಾರ್ಥಿನಿಯರು ತರಬೇತಿಯಲ್ಲಿ ಭಾಗವಹಿಸಿದ್ದರು.
ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರಾದ ಚಂದ್ರಪ್ಪ.ಡಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ತರಬೇತಿಯನ್ನು ಆಯೋಜನೆ ಮಾಡಿದ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕಕ್ಕೆ ಧನ್ಯವಾದ ಸಲ್ಲಿಸಿದರು.
ವೇದಿಕೆ ಆಹ್ವಾನವನ್ನು ಜೊತೆ ಕಾರ್ಯದರ್ಶಿಗಳಾದ ಪ್ರಮೋದ್.ಕೆ, ಜೆಸಿ ವಾಣಿಯನ್ನು ಜೆಜೆಸಿ ಅಧ್ಯಕ್ಷರಾದ ಸಮನ್ನಿತ್ ಕುಮಾರ್ ವಾಚಿಸಿದರು.
ಕಾರ್ಯಕ್ರಮದಲ್ಲಿ ಪೂರ್ವಾಧ್ಯಕ್ಷರಾದ ಪ್ರಸಾದ್ ಬಿ.ಎಸ್. ಭಾಗವಹಿಸಿದರು. ಕಾರ್ಯದರ್ಶಿಗಳಾದ ಅನುದೀಪ್ ಜೈನ್ ಇವರ ಧನ್ಯವಾದದೊಂದಿಗೆ ತರಬೇತಿ ಕಾರ್ಯಕ್ರಮ ಮುಕ್ತಾಯವಾಯಿತು.