ಮೊಗ್ರು : (ಜು. 19) ಬೆಳ್ತಂಗಡಿ ತಾಲೂಕಿನಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಹಲವು ಸಮಸ್ಯೆಗಳು ಎದುರಾಗುತ್ತಿದೆ.
ಇದನ್ನೂ ಓದಿ: https://uplustv.com/2024/07/19/microsoft-outage-ಜಾಗತಿಕವಾಗಿ-ಮೈಕ್ರೋಸಾಫ್ಟ್-ಸ್ಥಗಿತ
ವಿಪರೀತ ಮಳೆಯಿಂದಾಗಿ ಗುಡ್ಡ ಕುಸಿತ, ಮನೆ ಮೇಲೆ ಗೋಡೆ ಕುಸಿತ, ಮನೆಯ ಮೇಲೆ ಬಿದ್ದ ಬೃಹತ್ ಗಾತ್ರದ ಮರಗಳು , ಹೀಗೆ ಹಲವು ಸಮಸ್ಯೆ, ಸಂಕಷ್ಟಗಳು ಎದುರಾಗುತ್ತಿದೆ.
ಇದನ್ನೂ ಓದಿ: https://uplustv.com/2024/07/19/microsoft-outage-ಜಾಗತಿಕವಾಗಿ-ಮೈಕ್ರೋಸಾಫ್ಟ್-ಸ್ಥಗಿತ
ವಿಪರೀತ ಮಳೆಯ ಪರಿಣಾಮ ಮೊಗ್ರು ಗ್ರಾಮದ ಕಂಚಿನಡ್ಕ ಆನಂದರವರ ಮನೆಗೆ ಗುಡ್ಡ ಕುಸಿದು ಮನೆ ಸಂಪೂರ್ಣ ಬಿರುಕು ಬಿಟ್ಟು, ಸಂಪೂರ್ಣ ಹಾನಿ ಉಂಟಾಗಿದೆ. ಮನೆಯಲ್ಲಿ ವಾಸ್ತವ್ಯ ಮಾಡಲು ಕಷ್ಟದ ಪರಿಸ್ಥಿತಿ ನಿರ್ಮಾಣ ಆಗಿದೆ.
ಸ್ಥಳಕ್ಕೆ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಪಂಚಾಯತ್ ಸದಸ್ಯರಾದ ಮಂಜುಶ್ರೀ, ಶಿವಣ್ಣ, ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ, ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.