Sat. Dec 7th, 2024

Bengaluru: ಸ್ಟಾರ್ಟಪ್‌ನಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಿದಿಯಾ ?

ಬೆಂಗಳೂರು (ಜು. 27): ಭಾರತವು ನವೋದ್ಯಮದಲ್ಲಿ (ಸ್ಟಾರ್ಟಪ್) ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಹಾಗೂ ದೆಹಲಿ ಮೂರನೇ ಸ್ಥಾನವನ್ನು ಹೊಂದಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಜಿತಿನ್ ಪ್ರಸಾದ್ ಮಾಹಿತಿಯನ್ನು ನೀಡಿದ್ದಾರೆ.

ರಾಜ್ಯದಲ್ಲಿ 15,059 ನವೋದ್ಯಮಗಳು ನೋಂದಣಿ ಮಾಡಿಕೊಂಡಿದೆ ಎನ್ನಲಾಗಿದೆ. ದೆಹಲಿಯಲ್ಲಿ 14,734, ಉತ್ತರಪ್ರದೇಶ 13,299, ಗುಜರಾತ್ 11,436, ನವೋದ್ಯಮಗಳು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದೆ.

ದೇಶದಲ್ಲಿ ನವೋದ್ಯಮಗಳ ನೊಂದಣಿ ಸಂಖ್ಯೆ 14 ಲಕ್ಷಕ್ಕೆ ಏರಿದೆ ಎನ್ನಲಾಗಿದೆ. ಜೊತೆಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ನವೋದ್ಯಮಕ್ಕೆ ಪ್ರೋತ್ಸಾಹವನ್ನು ನೀಡುತ್ತಿದೆ. ಕಲ್ಯಾಣ ಕರ್ನಾಟಕವು ತಂತ್ರಜ್ಙಾನ ಇಲಾಖೆಯ ಮೂಲಕ ಎಲಿವೇಟ್ ಯೋಜನೆಯನ್ನು ಆರಂಭಿಸಲಾಗಿದೆ.

ನವೋದ್ಯಮಗಳನ್ನು ಆರಂಭಿಸುವ ಯುವಕ- ಯುವತಿಯರಿಗೆ ಈ ವರ್ಷ 4 ಕೋಟಿ ರೂಪಾಯಿ ಹಾಗೂ 19 ನವೋದ್ಯಮಿಯರಿಗೆ 2 ಕೋಟಿ ರೂಪಾಯಿ ಧನ ಸಹಾಯವನ್ನು ಮಾಡಲಾಗಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯ 11, ಬಳ್ಳಾರಿ ಜಿಲ್ಲೆಯ 3, ಕೊಪ್ಪಳ ಹಾಗೂ ಬೀದರ್ 2, ರಾಯಚೂರು ಜಿಲ್ಲೆ 1 ಸೇರಿದಂತೆ 19 ಸಂಸ್ಥೆಗಳನ್ನು ನವೋದ್ಯಮ ಸಂಸ್ಥೆಗಳಾಗಿ ಗುರಿತಿಸಲಾಗಿದೆ. 2035ರ ವೇಳೆಗೆ ಬೆಂಗಳೂರಿನ ಜಿಡಿಪಿ ಶೇ.8.5% ರಷ್ಟು ಆಗಲಿದೆ.

ಇದನ್ನೂ ಓದಿ: https://uplustv.com/2024/07/27/bengaluru-ಮಟನ್-ಜೊತೆ-ನಾಯಿ-ಮಾಂಸ-ಆಮದು-ಅಬ್ದುಲ್-ರಜಾಕ್-ಬದಲು

ರಾಜ್ಯದಲ್ಲಿ ಅತಿ ಹೆಚ್ಚು ಮಹಿಳಾ ಉದ್ಯಮಿಗಳಿದ್ದಾರೆ. ಬೆಂಗಳೂರು ನಗರದಲ್ಲಿ ಸುಮಾರು 1106ರಷ್ಟು ಕಾಲೇಜುಗಳಿವೆ 3600 ಕ್ಕು ಹೆಚ್ಚು ನವ ಉದ್ಯಮಿಗಳಿದ್ದಾರೆ ಮತ್ತು 1100 ಮಹಿಳೆಯರು ನವೋದ್ಯಮಗಳನ್ನು ನಡೆಸುತ್ತಿದ್ದಾರೆ ಎಂದು  ತಿಳಿಸಲಾಗಿದೆ.

Leave a Reply

Your email address will not be published. Required fields are marked *