Sat. Dec 7th, 2024

Mundur: ಸಂಘದ ಹಣವನ್ನು ಕಟ್ಟಲು ಹೋದ ಮಹಿಳೆ ವಾಪಸ್ಸು ಮನೆಗೆ ಬಾರದೆ ನಾಪತ್ತೆ

ಬೆಳ್ತಂಗಡಿ:(ಆ.17) ಮುಂಡೂರು ಗ್ರಾಮದ ಬಲ್ಲಿದಡ್ಡ ಮನೆ ನಿವಾಸಿ ಶ್ರೀಮತಿ ಶಿಲ್ಪಾ ರವರು ಸಂಘದ ಹಣವನ್ನು ಮುಂಡೂರಿನ ಕಛೇರಿಗೆ ಕಟ್ಟಿ ಬರುತ್ತೇನೆಂದು ಹೋದ ಮಹಿಳೆ ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುವ ಘಟನೆ ಆ.14ರಂದು ನಡೆದಿದೆ.

ಇದನ್ನೂ ಓದಿ:🛑Muda Scam: ಸಿಎಂಗೆ ಮುಡಾ ಸಂಕಷ್ಟ

ಪತಿ ಹರೀಶ್ ಬಂಗೇರರವರ ದೂರಿನಂತೆ ಮುಂಡೂರು ಗ್ರಾಮದ ಬಲ್ಲಿದಡ್ಡ ಮನೆ ನಿವಾಸಿ ಶ್ರೀಮತಿ ಶಿಲ್ಪಾ (27 ವರ್ಷ) ಎಂಬವರು ಮಗಳು ವಂಶಿಕಾಳನ್ನು ಶಾಲೆಗೆ ಕರೆದುಕೊಂಡು ಹೋಗಿ ನಂತರ ಧರ್ಮಸ್ಥಳ ಸ್ವಸಹಾಯ ಸಂಘದ ಹಣವನ್ನು ಮುಂಡೂರಿನ ಕಛೇರಿಗೆ ಕಟ್ಟಿ ಬರುತ್ತೇನೆಂದು ಮೊಬೈಲ್ ಅನ್ನು ಮನೆಯಲ್ಲಿ ಬಿಟ್ಟು ಹೋದವರು, ಮಗಳನ್ನು ನೆರೆಯ ಮನೆಯಲ್ಲಿ ಶಾಲೆಗೆ ಕರೆದುಕೊಂಡು ಹೋಗಲು ಹೇಳಿ ಹೋದವರು, ವಾಪಾಸ್ಸು ಮನೆಗೂ ಬಾರದೇ ಸಂಘದ ಕಛೇರಿಗೂ ಹೋಗದೇ ಕಾಣೆಯಾಗಿರುತ್ತಾರೆ.

ಇವರು 2021 ಅಕ್ಟೋಬರ್ ತಿಂಗಳಲ್ಲಿ ಕೂಡಾ ಮನೆಯಿಂದ ಟೈಲರಿಂಗ್ ಕೆಲಸಕ್ಕೆಂದು ಹೋದವರು ಕಾಣೆಯಾಗಿದ್ದು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಪೊಲೀಸರು ಬೆಂಗಳೂರಿನಲ್ಲಿ ಪತ್ತೆ ಮಾಡಿ ಕರೆದುಕೊಂಡು ಬರಲಾಗಿತ್ತು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *