Sat. Jan 18th, 2025

Belthangady:(ಜ.22 -ಜ.23) ಮುಗೇರಡ್ಕ ಮೂವರು ದೈವಗಳ ದೈವಸ್ಥಾನದ ವಾರ್ಷಿಕ ನೇಮೋತ್ಸವ

ಬೆಳ್ತಂಗಡಿ:(ಜ.18) ಮೊಗ್ರು ಗ್ರಾಮದ ಮುಗೇರಡ್ಕ ಮೂವರು ದೈವಗಳ ದೈವಸ್ಥಾನದ ವಾರ್ಷಿಕ ನೇಮೋತ್ಸವವು ಜ.22 ಮತ್ತು ಜ.23 ರಂದು ನಡೆಯಲಿದೆ.

ಇದನ್ನೂ ಓದಿ: ಉಜಿರೆ: ಉಜಿರೆಯ ಬೆನಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನೂತನ ವಿಸ್ತೃತ ಕಟ್ಟಡದ ಲೋಕಾರ್ಪಣೆ

ಜ.22 ರ ಬೆಳಗ್ಗೆ 9 ಗಂಟೆಗೆ , ಬಬ್ಬರಿ ಗುಡ್ಡೆಯಲ್ಲಿ ದೈವಂಕ್ಳು ಪರ್ವ, ಸಂಜೆ 5:30 ಕ್ಕೆ ದೈವಸ್ಥಾನದಲ್ಲಿ ತೋರಣ ಮುಹೂರ್ತ, ರಾತ್ರಿ 11 ಗಂಟೆಗೆ ದೈವಗಳ ಭಂಡಾರ ಕ್ಷೇತ್ರಕ್ಕೆ ಆಗಮನ, ರಾತ್ರಿ 12 ಕ್ಕೆ ಶುದ್ಧಕಲಶ ಮತ್ತು ಹೊಸ ಹುಲಿಬಂಡಿ ದೈವಕ್ಕೆ ಒಪ್ಪಿಸುವಿಕೆ, ರಾತ್ರಿ 1 ರಿಂದ 5 :00 ರವರೆಗೆ ಪರಿವಾರ ದೈವಗಳ ನೇಮೋತ್ಸವ ಆರಂಭವಾಗಲಿದೆ.

ಜ.23 ರಂದು ಬೆಳಗ್ಗೆ 8 ರಿಂದ ಕಲ್ಕುಡ, ಪಿಲಿಚಾಮುಂಡಿ ದೈವದ ಗಗ್ಗರ , ನರ್ತನ ಸೇವೆ ಆರಂಭ, ಬೆಳಗ್ಗೆ 10 ರಿಂದ ಶಿರಾಡಿ ದೈವದ ಗಗ್ಗರ, ನರ್ತನ ಸೇವೆ ಆರಂಭ, ಮಧ್ಯಾಹ್ನ 12 ರಿಂದ ಅನ್ನಸಂತರ್ಪಣೆ, ಮಧ್ಯಾಹ್ನ 2:30ಕ್ಕೆ ಶಿರಾಡಿ ದೈವದ ಹುಲಿ ಸವಾರಿ, ಸಂಜೆ 7 ಗಂಟೆಗೆ ಬಸ್ತಿ ನಾಯ್ಕ ದೈವದ ನರ್ತನ ಸೇವೆ ಆರಂಭ, ರಾತ್ರಿ 10ಕ್ಕೆ ದೈವದ ಭಂಡಾರ ಕ್ಷೇತ್ರದಿಂದ ಭಂಡಾರ ಮನೆಗೆ ನಿರ್ಗಮನವಾಗಲಿದೆ.

ಎಲ್ಲಾ ದೈವ ಕಾರ್ಯಗಳಲ್ಲಿ ಪಾಲ್ಗೊಂಡು , ಶ್ರೀ ದೈವದ ಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೈವದ ಕೃಪೆಗೆ ಪಾತ್ರರಾಗಬೇಕೆಂದು, ಕ್ಷೇತ್ರದ ಆಡಳಿತ ಮೊಕ್ತೇಸರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *